ಮೈಸೂರು

ರಸ್ತೆ ಬದಿ ವ್ಯಾಪಾರಕ್ಕೆ 25 ಸ್ಥಳ ನಿಗದಿ: ಮೇಯರ್

ನಗರದ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ 25 ಸ್ಥಳಗಳನ್ನು ಗುರುತು ಮಾಡಲಾಗಿದೆ. ಇಲ್ಲಿ ಬೀದಿ ವ್ಯಾಪಾರಿಗಳು ದಿನ ಬಾಡಿಗೆ ನೀಡಿ ವ್ಯಾಪಾರ ಮಾಡಬಹುದು ಎಂದು ಮೇಯರ್ ಬಿ.ಎಲ್. ಬೈರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಸೂಚಿಸಿದೆ. ಅವರನ್ನು ರಸ್ತೆ ಬದಿಯಿಂದ ತೆರವು ಮಾಡಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಪಟ್ಟಣ ವ್ಯಾಪಾರ ಸಮಿತಿ ಸಭೆಯಲ್ಲಿ ರಸ್ತೆ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ 25 ಕಡೆ ಹಾಕಿಂಗ್ ಜೋನ್ ಗುರುತಿಸಲಾಗಿದೆ ಎಂದರು.

ಪಟ್ಟಣ ವ್ಯಾಪಾರ ಸಮಿತಿ ನಿಗದಿತ 25 ಸ್ಥಳಗಳಲ್ಲಿ ದಿನ ಬಾಡಿಗೆ ಪಡೆದು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಲಿದೆ. ನಂಜನಗೂಡಿನ ಹರಿಶ್ಚಂದ್ರ ರಸ್ತೆ, ಜೆಪಿ ನಗರದ ಜೋಡಿ ರಸ್ತೆಯ ಕೊನೆಯ ಬಸ್ ನಿಲ್ದಾಣ, ಸೇಂಟ್ ಥಾಮಸ್ ಶಾಲೆ ಎದುರಿನ ರಸ್ತೆ, ಅಶೋಕಪುರಂನ ಎನ್‍ಐಇ ಕಾಲೇಜು ಹಿಂಭಾಗ, ಜಯನಗರದ ಸರಕಾರಿ ಆಸ್ಪತ್ರೆ ಎದುರು ರಸ್ತೆ ಬದಿ ವ್ಯಾಪಾರ ನಡೆಸಲು ವಲಯ ಆಯುಕ್ತರು ಸ್ಥಳ ಗುರುತಿಸಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲು ಕ್ರಮ ವಹಿಸಲಾಗುವುದು. ಪಾಲಿಕೆ ಸಭೆ ಈಗಾಗಲೇ ಒಟ್ಟು 14 ಸ್ಥಳಗಳನ್ನು ನಾನ್ ಪೆಂಡಿಂಗ್ ಜೋನ್ ಎಂದು ಗುರುತಿಸಿದೆ. ಇಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಹೇಳಿದರು.

 

Leave a Reply

comments

Related Articles

error: