ಮೈಸೂರು

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಮೈಸೂರು, ಜುಲೈ 12 : ಮೈಸೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಡಿ ವೃಂದದ ಅಡುಗೆ ಸಹಾಯಕರ ಹಾಗೂ ರಾತ್ರಿ ಕಾವಲುಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 1:1 ಅನುಪಾತದಲ್ಲಿ ವೆಬ್‍ಸೈಟ್ www.mysore.nic.in ನಲ್ಲಿ ಪ್ರಕಟಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಲಿಖಿತವಾಗಿ ಸೂಕ್ತ ದಾಖಲಾತಿಗಳೊಂದಿಗೆ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಡಾ. ಬಾಬುಜಗಜೀವನ ರಾಮ್ ಭವನ, ಆದಿಪಂಪ ರಸ್ತೆ, ನಾರಾಯಣಸ್ವಾಮಿ ಬ್ಲಾಕ್, ಪಡುವಾರಹಳ್ಳಿ ಪೂರ್ವ ಬಡಾವಣೆ ಮೈಸೂರು-2 ಇಲ್ಲಿಗೆ ಜುಲೈ 24 ರ ಸಂಜೆ 5-30 ಗಂಟೆಯೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2344661 ನ್ನು ಸಂಪರ್ಕಿಸುವುದು.
-ಎನ್.ಬಿ.

Leave a Reply

comments

Related Articles

error: