ದೇಶಪ್ರಮುಖ ಸುದ್ದಿವಿದೇಶ

ಪುಟಿನ್-ಮೋದಿ ದ್ವಿಪಕ್ಷೀಯ ಮಾತುಕತೆ: ಹೊಸ ಮಿತ್ರರಿಗಿಂತ ಹಳೆಯ ಸ್ನೇಹಿತನೇ ಉತ್ತಮವೆಂದ ಭಾರತ

ಗೋವಾದಲ್ಲಿ ಆರಂಭವಾಗಿರುವ ಐದು ರಾಷ್ಟ್ರಗಳ ಬ್ರಿಕ್ಸ್ ಸಮಾವೇಶದ ಪಾರ್ಶ್ವದಲ್ಲಿ ನಡೆದ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ಜೊತೆಗಿನ ಮಾತುಕತೆ ಫಲಪ್ರದವಾಗಿದ್ದು, ಮಾತುಕತೆಯ ನಂತರ ಮಾತನಾಡಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಇಬ್ಬರು ಹೊಸ ಮಿತ್ರರಿಗಿಂತ ಓರ್ವ ಹಳೆಯ ಸ್ನೇಹಿತನೇ ಉತ್ತಮ” ಎಂದು ಹೇಳಿದ್ದಾರೆ.

ಈ ಮಾತುಕತೆಯು ಭಾರತ-ರಷ್ಯಾ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದು, ರಷ್ಯಾ ಮತ್ತು ಭಾರತದ ರಾಜತಾಂತ್ರಿಕ ನಿಯೋಗಗಳು ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿವೆ. ರಕ್ಷಣಾ ಕ್ಷೇತ್ರ, ಇಂಧನ, ಹಡಗು ನಿರ್ಮಾಣ, ಬಾಹ್ಯಾಕಾಶ ಸೇರಿ ಒಟ್ಟು 16 ದ್ವಿಪಕ್ಷೀಯ ಸಹಕಾರ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ.

ರಕ್ಷಣಾ ಕ್ಷೇತ್ರ: ದ್ವಿಪಕ್ಷೀಯ ವಾರ್ಷಿಕ ಸಮ್ಮೇಳನಕ್ಕೆ ಅಸ್ತು: ಭಾರತದ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಗೆ ಮೊದಲು ಸಕಾರಾತ್ಮಕವಾಗಿ ಸ್ಪಂದಿಸಿದ ದೇಶ ರಷ್ಯಾ. ಇದರ ಮುಂದುವರಿದ ಭಾಗವಾಗಿ ಸೇನಾ ಸಲಕರಣೆ – ಶಸ್ತ್ರಾಸ್ತ್ರ ತಯಾರಿಕಾ ಕ್ಷೇತ್ರದ ಪರಸ್ಪರ ಸಹಕಾರಕ್ಕಾಗಿ ವಾರ್ಷಿಕ “ಮಿಲಿಟರಿ ಕೈಗಾರಿಕಾ ಸಮ್ಮೇಳನ” ನಡೆಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.

Leave a Reply

comments

Related Articles

error: