ಮೈಸೂರು

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು: ಲೋಬ್ಸಾಂಗ್ ಯೇಶಿ

ಬೈಲಕುಪ್ಪೆ: ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಬೇಕು ಎಂದು ಟಿಬೇಟಿಯನ್ ಸರಕಾರದ ಸಂಸದ ಲೋಬ್ಸಾಂಗ್ ಯೇಶಿ ಹೇಳಿದರು. ಬೈಲಕುಪ್ಪೆಯ ಟಿಬೆಟನ್ ನಿರಾಶ್ರಿತರ ಎಸ್‌ಒಎಸ್ ಶಾಲೆಯಲ್ಲಿ ನಡೆದ 32ನೇ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಾವು ಓದಿದ ಶಾಲೆಗೂ, ಶಿಕ್ಷಕರಿಗೂ, ಹಾಗೂ ಪೊಷಕರಿಗೂ ಹೆಮ್ಮೆ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವೈಜ್ಞಾನಿಕತೆ ಮತ್ತು ತಂತ್ರಜ್ಞಾನ ಗತಿಗೆ ಸಮಾಜ ವೇಗವಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಪಠ್ಯ ಕ್ರಮದೊಂದಿಗೆ ಪಠೇತ್ಯರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ದೈಹಿಕ ಬಲ, ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ನಂತರ ವಿದ್ಯಾರ್ಥಿಗಳು ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟು ನಂತರ  100, 200, 400, 800 ಮೀ. ಓಟದ ಸ್ಫರ್ಧೆ, ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥ ಸಿರಿಂಗ್ ಪಾಲ್ದೇನ್, ಪ್ರಾಂಶುಪಾಲ ಡುಂಡುಪ್ ಸಿರಿಂಗ್, ವಿವಿದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

img20161015084512-web

 

Leave a Reply

comments

Related Articles

error: