ಮೈಸೂರು

ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮೈಸೂರು, ಜು.13: ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಕೇಂದ್ರ ಸರಕಾರ ಜಿ ಎಸ್ ಟಿ 12% ವಿಧಿಸಿರುವುದನ್ನು ಖಂಡಿಸಿ, ಕೂಡಲೇ ತೆರಿಗೆ ರದ್ದುಪಡಿಸಿ ಉಚಿತವಾಗಿ ಗುಣಮಟ್ಟದ ಹಾಗೂ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯು ಇಂದು  ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಮಾಡಿತು.

ಕೇಂದ್ರ ಸಮಿತಿ ಸದಸ್ಯರಾದ ಕಾಮ್ರೇಡ್ ರೇಣುಕಾ ಕಹಾರ ಅಭಿಯಾನಕ್ಕೆ  ಚಾಲನೆ ನೀಡಿದರು. ವಿದ್ಯಾರ್ಥಿಗಳು, ಮಹಿಳೆಯರು, ಸಾರ್ಜನಿಕರು ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಕೆಂದ್ರ ಸರಕಾರದ ನಡೆ ವಿರೋಧಿಸಿ ಎಸ್.ಎಫ್.ಐ ನಡೆಸುತ್ತಿರುವ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಸದಸ್ಯ ಬಸವರಾಜ ಪೂಜಾರ,  ಕ್ರಿಯಾಮಾಧ್ಯಮ ಮತ್ತು  ಪುಸ್ತಕಪ್ರೀತಿ ನಿರ್ದೇಶಕರಲ್ಲೊಬ್ಬರಾದ ಕಾಮ್ರೇಡ್ ಚಂದ್ರು, ಜಿಲ್ಲಾಧ್ಯಕ್ಷರಾದ ಕಾಮ್ರೇಡ್ ವೇಗಾನಂದ, ಕಾರ್ಯದರ್ಶಿ ಸಿ. ಅಮರೇಶ್, ಮುಖಂಡರಾದ ಹನುಮಂತ ದುರ್ಗದ, ಗೋಪನಾಥ, ಚಿತ್ರಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಈ ಉದ್ಘಾಟನೆಗೊಂಡ ಸಹಿ ಸಂಗ್ರಹ ಅಭಿಯಾನವು ವಿವಿಧ ಕಾಲೇಜುಗಳಲ್ಲಿ ಸಹಿ ಸಂಗ್ರಹಕ್ಕೆ ಮುನ್ನಡೆಯಲಿದೆ.(ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: