ಸುದ್ದಿ ಸಂಕ್ಷಿಪ್ತ

ಮಲ್ಲಮ್ಮ ಹನುಮಂತಪ್ಪ ದತ್ತಿ ಉಪನ್ಯಾಸ

ಸೋಮವಾರಪೇಟೆ,ಜು.13:- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಮತ್ತು ಶನಿವಾರಸಂತೆ ಭಾರತಿ ಪ್ರ.ದ.ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜು 14ರ ಶುಕ್ರವಾರ ಮಧ್ಯಾಹ್ನ 2-30ಕ್ಕೆ ಲಿಂಗೈಕ್ಯ ಮಲ್ಲಮ್ಮ ಹನುಮಂತಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಚಾರ್ಯಸ್ವಾಮೀಜಿ ವಹಿಸಲಿದ್ದಾರೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್‍ಗೌಸ್, ತಾ.ಪಂ. ಸದಸ್ಯ ಬಿ.ಎಸ್. ಅನಂತ್‍ಕುಮಾರ್, ತಾಲೂೀಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾದೇವಪ್ಪ,  ಬೆಂಗಳೂರಿನ ದತ್ತಿನಿಧಿ ಸ್ಥಾಪಕ ಬಿ. ಭೀಮಪ್ಪ, ಪರಿಷತ್ತಿನ ಪ್ರಮುಖರುಗಳಾದ ಪುಟ್ಟಸ್ವಾಮಿ, ಎಂ.ಬಿ. ನಾಗಪ್ಪ, ಡಿ.ಬಿ. ಧರ್ಮಪ್ಪ, ಸಿ.ವಿ. ವಿಶ್ವನಾಥ್, ಶಿವಪ್ರಕಾಶ್, ಶನಿವಾರಸಂತೆ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್, ಉಪನ್ಯಾಸಕ ಕೆ.ಪಿ. ಜಯಕುಮಾರ್ ಮುಂತಾದವರು ಭಾಗವಹಿಸಲಿರುವರೆಂದು ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: