ಪ್ರಮುಖ ಸುದ್ದಿ

ಚಿರತೆ ದಾಳಿಗೆ ನಾಯಿ ಬಲಿ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಜು.೧೩: ಚಿರತೆ ದಾಳಿಗೆ ನಾಯಿಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ತಗ್ಗಲೂರು ಗ್ರಾಮದ ಬಳಿ ನಡೆದಿದೆ.
ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿ ಕಟ್ಟಿಹಾಕಿದ್ದ ನಾಯಿಯ ಮೇಲೆ ದಾಳಿನಡೆಸಿದ ಚಿರತೆ ಹೊತ್ತೊಯ್ಯಲು ಮುಂದಾಗಿದೆ. ಆದರೆ ನಾಯಿಯ ಚೀರಾಟ ಕೇಳಿ ಮನೆಯವರು ಎಚ್ಚರಗೊಳ್ಳುತ್ತಿದ್ದಂತೆ ಚಿರತೆ ಪರಾರಿಯಾಗಿದೆ. ದಾಳಿಯಿಂದ ನಾಯಿ ಸಾವನ್ನಪ್ಪಿದ್ದು ಗ್ರಾಮಸ್ಥರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರ ನಿದ್ದೆಗೆಡಿಸಿರುವ ಚಿರತೆಯನ್ನು ಕೂಡಲೇ ಸೆರೆಹಿಡಿದು ಕಾಡಿಗೆ ಬಿಡುವಂತೆ ಒತ್ತಾಯಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: