ದೇಶಪ್ರಮುಖ ಸುದ್ದಿ

ಹಳೆಯ ಚಿನ್ನಾಭರಣ, ವಾಹನಗಳ ಮಾರಾಟಕ್ಕೆ ಜಿಎಸ್ಟಿ ಇಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ, ಜು.14: ಹಳೆಯ ಚಿನ್ನಾಭರಣ ಮತ್ತು ಹಳೆಯ ವಾಹನಗಳ ಮಾರಾಟಕ್ಕೆ ಯಾವುದೇ ರೀತಿಯ ಜಿಎಸ್ ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ  ಸ್ಪಷ್ಟಪಡಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಅಧಿಯಾರ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಆಭರಣ ವ್ಯಾಪಾರಿಗೆ ವ್ಯಕ್ತಿಯು ಹಳೆಯ ಚಿನ್ನ ಮಾರಾಟ ಮಾಡುವುದು ಕಾಯ್ದೆಯ ಕಲಂ9 (4) ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ತೆರಿಗೆ ಪಾವತಿಸಬೇಕಾಗಿಲ್ಲ. ಇದೇ ನೀತಿ ಹಳೆ ಕಾರು, ದ್ವಿಚಕ್ರ ವಾಹನ ಮಾರಾಟಕ್ಕೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಫ್ಲ್ಯಾಟ್ ಗಳಲ್ಲಿ ನಿರ್ವಹಣಾ ವೆಚ್ಚವಾಗಿ ಹೌಸಿಂಗ್ ಸೊಸೈಟಿಗಳು ವಿಧಿಸುವ ಮಾಸಿಕ ಶುಲ್ಕ ರೂ. 5 ಸಾವಿರ ಗಿಂತ ಕಡಿಮೆಯಿದ್ದಲ್ಲಿ ಮತ್ತು ವಾರ್ಷಿಕ ರೂ..20 ಲಕ್ಷಕ್ಕಿಂತ ಮೀರದ ವ್ಯವಹಾರ ನಡೆಸದಿದ್ದಲ್ಲಿ, ಜಿಎಸ್ ಟಿ ಪಾವತಿಸುವ ಅಗತ್ಯವಿಲ್ಲವೆಂದೂ ಸ್ಫಷ್ಟಪಡಿಸಿದ್ದಾರೆ. (ವರದಿ: ಎಲ್.ಜಿ)

 

Leave a Reply

comments

Related Articles

error: