ಮೈಸೂರು

ಕಾರ್ಮಿಕ ಸಂಘಟನೆಗಳ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಬಸ್ ಸಂಚಾರ ಬೆಳಿಗ್ಗೆ ಎಂದಿನಂತೆಯೇ ಇತ್ತು. ಮಧ್ಯಾಹ್ನದ ವೇಳೆ ಬಸ್ ಸಂಚಾರ ಸ್ಥಗಿತಗೊಂಡಿದೆ.  ಬ್ಯಾಂಕ್, ಟೆಲಿಕಾಂ, ಇನ್ಶುರೆನ್ಸ್ ನೌಕರರು ಬಂದ್ ಗೆ ಬೆಂಬಲ ನೀಡಿದ್ದಾರೆ. ಗಾಂಧಿ ಸ್ಕ್ವೇರ್ ಬಳಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಸೆಂಟರ್ ಆಫ್ ಟ್ರೇಡ್ ಯೂನಿಯನ್, ಎಂಪ್ಲಾಯೀಸ್ ಆಫ್ ರಾನೆ ಮದ್ರಾಸ್ ಸೇರಿದಂತೆ ವಿವಿಧ ಸಂಘಟನೆಗಳ 5 ಸಾವಿರಕ್ಕೂ ಅಧಿಕ ಸದಸ್ಯರು ಪ್ರತಿಭಟನೆ ನಡೆಸಿ,  ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸರಿಸುಮಾರು ಎಲ್ಲ ಸಾರ್ವಜನಿಕ ಸೇವೆಗಳು ಸ್ಥಗಿತಗೊಂಡಿತ್ತು. ಬೃಹತ್ ಕಾರ್ಖಾನೆಗಳ, ಇನ್ಶುರೆನ್ಸ್ ಕಂಪನಿಗಳ ಕಾರ್ಮಿಕರು ಬಂದ್‍ಗೆ ಬೆಂಬಲ ನೀಡಿದ್ದರು. ಬಸ್ ನಿಲ್ದಾಣ ಮತ್ತು ಬಸ್ ಡಿಪೋಗಳಲ್ಲಿ ಸಾಲು ಸಾಲಾಗಿ ಬಸ್ ನಿಂತಿರುವುದು ಕಂಡು ಬಂತು. ರಾಜ್ಯದಲ್ಲಿ ಕಳೆದ ತಿಂಗಳಷ್ಟೇ ಕೆಎಸ್‍ಆರ್‍ಟಿಸಿ ಬಸ್ ನಿರ್ವಾಹಕರು- ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮೂರು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಅಲ್ಲೊಂದು ಇಲ್ಲೊಂದು ರಿಕ್ಷಾ, ಕ್ಯಾಬ್‍ ರಸ್ತೆಗಿಳಿದಿದ್ದವು.

ಚಿತ್ರಮಂದಿರಗಳು, ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದರೆ, ಬೆರಳೆಣಿಕೆಯ ಅಂಗಡಿಗಳು ಮಾತ್ರ ತೆರೆದಿದ್ದವು. ಆಸ್ಪತ್ರೆಗಳು, ಔಷಧಿ ಮಳಿಗೆಗಳು, ಹಾಲಿನ ಅಂಗಡಿಗಳಂತಹ ಅಗತ್ಯ ವಸ್ತುಗಳಿಗೆ ವಿನಾಯಿತಿ ಇತ್ತು.

ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು.  ದುಷ್ಕರ್ಮಿಗಳು ನಡೆಸಬಹುದಾದ ಸಂಭಾವ್ಯ ಅಹಿತಕರ ಘಟನೆ ನಿಯಂತ್ರಿಸಲು ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಪೆಟ್ರೋಲ್ ಬಂಕ್‍ಗಳ ಬಳಿಯೂ ಪೊಲೀಸರ ಉಪಸ್ಥಿತಿ ಕಂಡುಬಂತು.

KSRTC

 

 

Devaraja Urs Road

Leave a Reply

comments

Related Articles

error: