ಮೈಸೂರು

ಜುಲೈ 17-25 : ತಾಲೂಕು ಕೇಂದ್ರಗಳಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಮೈಸೂರು, ಜುಲೈ 14 : ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಜುಲೈ 17 ರಿಂದ 25 ರವರೆಗೆ ಬೆಳಗಿನ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಂದ ದೂರು/ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷೆ ಜೆ.ಕೆ. ರಶ್ಮಿ ಅವರು ತಿಳಿಸಿದ್ದಾರೆ.

ಜುಲೈ 17: ಮೈಸೂರು ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹ, ಜುಲೈ 18: ತಾಲೂಕು ಕಛೇರಿ ಆವರಣ ಮೈಸೂರು, ಜುಲೈ 19: ತಾಲ್ಲೂಕು ಕಚೇರಿ ಆವರಣ, ಟಿ.ನರಸೀಪುರ ಜುಲೈ 20: ಪಿಡಬ್ಲ್ಯೂಡಿ ಅತಿಥಿ ಗೃಹ ಹೆಚ್.ಡಿ.ಕೋಟೆ, ಜುಲೈ 21: ಪಿಡಬ್ಲ್ಯೂಡಿ ಅತಿಥಿ ಗೃಹ ಪಿರಿಯಾಪಟ್ಟಣ, ಜುಲೈ 22: ಪಿಡಬ್ಲ್ಯೂಡಿ ಅತಿಥಿ ಗೃಹ ಹುಣಸೂರು,  ಜುಲೈ 24: ತಾಲ್ಲೂಕು ಕಚೇರಿ ಆವರಣ ನಂಜನಗೂಡು ಹಾಗೂ ಜುಲೈ 25:  ಪಿಡಬ್ಲ್ಯೂಡಿ ಅತಿಥಿ ಗೃಹ ಕೆ.ಆರ್.ನಗರ ತಾಲ್ಲೂಕಿನಲ್ಲಿ ನಡೆಯಲಿದೆ.

ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರೆ ತೊಂದರೆ ನೀಡುವ ಸರ್ಕಾರಿ ಅಧಿಕಾರಿ ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2521100 ನ್ನು ಸಂಪರ್ಕಿಸುವುದು. ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

-ಎನ್.ಬಿ.

Leave a Reply

comments

Related Articles

error: