ಕರ್ನಾಟಕಪ್ರಮುಖ ಸುದ್ದಿಮೈಸೂರು

ವರುಣಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಡಾ. ಯತೀಂದ್ರ? ಸಿಎಂ ಸುಳಿವು

ಮೈಸೂರು,ಜು.14:- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗ ಡಾ.ಯತೀಂದ್ರನನ್ನು ಕಣಕ್ಕಿಳಿಸಲಿದ್ದಾರೆ  ಹೀಗೊಂದು ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ವರುಣಾ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ಬಳಿಕ ಸಿದ್ದರಾಮಯ್ಯ ಮಾತನಾಡಿ ವರುಣಾ ಕ್ಷೇತ್ರಕ್ಕೆ ಹೆಚ್ಚಾಗಿ ಬರಲಾಗುತ್ತಿಲ್ಲ. ನೀವು ಯಾರೂ ತಪ್ಪು ತಿಳಿಯಬೇಡಿ. ಹಿಂದೆ ನನ್ನ ಮಗ ರಾಕೇಶ್ ಬರುತ್ತಿದ್ದ, ಆತ ಅಕಾಲಿಕ ಸಾವನ್ನಪ್ಪಿದ ಕಾರಣ ನನ್ನ‌ಮಗ ಯತೀಂದ್ರ ವೈದ್ಯ ವೃತ್ತಿ ಬಿಟ್ಟು ಬಂದಿದ್ದಾನೆ. ಯತೀಂದ್ರ ವರುಣಾ ಕ್ಷೇತ್ರದ ಜನರ ಕಷ್ಟ ಸುಖ ನೋಡಿಕೊಳ್ಳುತ್ತಾನೆ. ಕಳೆದ ಬಾರಿ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದೀರಿ. ಮುಂದಿನ‌ ಬಾರಿಯೂ ಆಶೀರ್ವಾದ ಮಾಡಿ ಎಂದಿರುವುದು ಮುಖ್ಯಮಂತ್ರಿಗಳು ತನ್ನ ಮಗನನ್ನು ಚುನಾವಣಾ ಕಣಕ್ಕಿಳಿಸಬೇಕು ಎಂದು ಲೆಕ್ಕಾಚಾರ ಹಾಕಿದಂತಿದೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: