ಮೈಸೂರು

ಜು. 15 ರಿಂದ ಬೀದಿ ನಾಟಕ ತರಬೇತಿ ಮತ್ತು ಪ್ರದರ್ಶನ

ಮೈಸೂರು, ಜು. 14 : ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 126 ನೇ ವರ್ಷಾಚರಣೆ ಅಂಗವಾಗಿ “ಸಮಾನತೆ ಅನ್ವೇಷಣೆ” ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ‘ಡಾ. ಬಿ. ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶದ’ ಸಾಂಸ್ಕೃತಿಕ ವೇದಿಕೆಯಲ್ಲಿ ಬೀದಿ ನಾಟಕದ ತಂಡಗಳ ತರಬೇತಿ ಹಾಗೂ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಮಾರ್ಗದರ್ಶಕ ಹೆಚ್. ಜನಾರ್ಧನ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 21 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾನಿಲಯ ಕೇಂದ್ರದಲ್ಲಿ  ಸಮ್ಮೇಳನ ನಡೆಯಲಿದ್ದು, ಅದಕ್ಕೆ ಪೂರಕವಾಗಿ ನೆಲೆ ಹಿನ್ನೆಲೆ ಸಂಸ್ಥೆಯ ನೇತೃತ್ವದಲ್ಲಿ ಜು. 15 ರಿಂದ 20 ರ ವರೆಗೆ ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಮೂರು ಬೀದಿ ನಾಟಕ ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ ಎಂದರು.

ಈ ಸಂಬಂಧ ಮೈಸೂರಿನಲ್ಲಿ ಜು. 15 ರಂದು ತರಬೇತಿ ಆರಂಭವಾಗಲಿದ್ದು, ರಾಷ್ಟ್ರಮಟ್ಟದ ಹೆಸರಾಂತ ರಂಗ ನಿರ್ಧೇಶಕರು ತರಬೇತಿ ನೀಡಲಿದ್ದಾರೆ. ಜು. 17 ರಿಂದ ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯ ಪ್ರತಿನಿಧಿಗಳು ತಾಲೂಕು, ಹೋಬಳಿ, ಮತ್ತು ಹಳ್ಳಿಗಳಲ್ಲಿ ಅಂಬೇಡ್ಕರ್ ಕುರಿತ ಬೀದಿ ನಾಟಕ, ಮತ್ತು ಹೋರಾಟ ಗೀತೆಗಳನ್ನು ಪ್ರಸ್ತುತಪಡಿಸಲಿದ್ದು ಅಂತಿಮವಾಗಿ ಜು. 21 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಮೂರು ಬೀದಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ನೆಲೆ ಹಿನ್ನೆಲೆ ಸಂಘಟಕ ಕೆ. ಆರ್. ಗೋಪಾಲಕೃಷ್ಣ, ಗಾಯಕ ದೇವಾನಂದ ವರಪ್ರಸಾದ್ ಸೇರಿದಂತೆ ಮತ್ತಿತರರು ಹಾಜರಿದ್ದರು.⁠⁠⁠⁠ (ವರದಿ : ಕೆ.ಎಂ.ಆರ್)

Leave a Reply

comments

Related Articles

error: