ಕರ್ನಾಟಕ

ಸರ್ಕಾರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು : ಕೆ.ಎಸ್.ಪುಟ್ಟಣ್ಣಯ್ಯ

ರಾಜ್ಯ(ಮಂಡ್ಯ)ಜು.14:- ವಿಷಯುಕ್ತ ಆಹಾರ, ಪ್ರಕೃತಿನಾಶ, ವಿಷಯುಕ್ತ ಗಾಳಿಯಿಂದಲೂ ಅಂಗವಿಕಲ ಮಕ್ಕಳು ಹುಟ್ಟುವ ಸಂಭವ ಇರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.
ಪಾಂಡವಪುರ ಪಟ್ಟಣದ ನಿರ್ಮಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಏರ್ಪಡಿಸಿದ್ದ, ವಿಶೇಷ ಚೇತನ ಮಕ್ಕಳ ಮೌಲ್ಯಾಂಕನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ  ಮಾತನಾಡಿದರು. ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲತೆ ಬಗ್ಗೆ ಜಾಗೃತಿ ಮೂಡಿಸಬೇಕು ಜತೆಗೆ ಶಿಕ್ಷಕರು ಶಾಲೆಗಳಲ್ಲಿ ಈ ಬಗ್ಗೆ ಕ್ರಾಂತಿಕಾರಕ ರೀತಿಯಲ್ಲಿ ವ್ಯಾಪಕ ಪ್ರಚಾರ ನಡೆಸದಿದ್ದರೆ ಅಂಗವಿಕಲತೆ ತಡೆಯಲು ಅಸಾಧ್ಯ ಎಂದರು. ಅಂಗವಿಕಲ ಮಕ್ಕಳನ್ನು ಪೋಷಿಸುವುದು ತಾಯಂದಿರಿಗೆ ದೊಡ್ಡ ಸವಾಲಾಗಿದೆ, ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು, ಸರಕಾರದ ನಿರ್ಲಕ್ಷ್ಯದಿಂದ ಅಂಗವಿಕಲ ಸಮಾಜ ಸೃಷ್ಠಿಯಾಗಿದ್ದು ಅಂಗವಿಲಕ ಮಕ್ಕಳ ಪೋಷಣಾ ಭತ್ಯೆಯನ್ನು ತಾಯಂದಿರಿಗೆ ಸರ್ಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಆರ್.ಯಶೋದ ಮಾತನಾಡಿ, ತಾಲೂಕಿನಲ್ಲಿರುವ ಅಂಗವಿಕಲ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸುವುದಾಗಿ ಹೇಳಿದರು. ಬಿಇಒ ಚಂದ್ರಶೇಖರ್, ತಾ.ಪಂ.ಉಪಾಧ್ಯಕ್ಷೆ ಲಕ್ಷ್ಮಮ್ಮ ರಂಗಸ್ವಾಮಿ ಸಹಾ ಮಾತನಾಡಿದರು.
ಜಿ.ಪಂ.ಸದಸ್ಯರಾದ ಹೆಚ್.ತ್ಯಾಗರಾಜು, ಅನುಸೂಯ ದೇವರಾಜು, ಶಾಂತಲಾ ರಾಮಕೃಷ್ಣ, ತಾ.ಪಂ.ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ತಾ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಸದಸ್ಯರಾದ ರಾಮೇಗೌಡ, ಗಾಯತ್ರಿ, ನವೀನವೆಂಕಟೆಶ್, ಬಿ.ಇ.ಒ. ಚಂದ್ರಶೇಖರ್ ತಿಮ್ಮರಾಯಿಗೌಡ, ಸೇರಿದಂತೆ ಹಲವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: