ಕರ್ನಾಟಕಪ್ರಮುಖ ಸುದ್ದಿ

ಜುಲೈ 21 ರಂದು ಕಲಾ ವಿಮರ್ಶೆ ಕಮ್ಮಟ

ಬೆಂಗಳೂರು, ಜುಲೈ 14 : ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ನಗರದ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ಎರಡನೇ ಮಹಡಿಯಲ್ಲಿರುವ “ವರ್ಣ ಆರ್ಟ್ ಗ್ಯಾಲರಿ” ಯಲ್ಲಿ ಜುಲೈ 21 ರಂದು ಬೆಳಿಗ್ಗೆ 10.30 ಗಂಟೆಗೆ ಕಲಾ ವಿಮರ್ಶೆ ಕಮ್ಮಟವನ್ನು ಹಮ್ಮಿಕೊಂಡಿದೆ.

ಹಿರಿಯ ಸಾಹಿತಿ ಕಮ್ಮಟದ ನಿರ್ದೇಶಕ  ಓ.ಎಲ್. ನಾಗಭೂಷಣ ಸ್ವಾಮಿ ಅವರು ಕಲಾ ವಿಮರ್ಶೆ ಸ್ವರೂಪ ನೆಲೆಗಳು ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ಕಲಾ ಪ್ರಾಧ್ಯಪಕ ಡಾ. ಶ್ರೀಧರ್ ಮೂರ್ತಿ ಅವರಿಂದ ಚಿತ್ರಕಲಾ ವಿಮರ್ಶೆ ನಡೆಸಿಕೊಡಲಿದ್ದಾರೆ. ಈ ಕಲಾ ವಿಮರ್ಶೆ ಕಮ್ಮಟದ ಅಧ್ಯಕ್ಷತೆಯನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷೆ ಡಾ. ಎಂ.ಎಸ್. ಮೂರ್ತಿ ಅವರು ವಹಿಸಲಿದ್ದಾರೆ.

ಕಲಾ ಇತಿಹಾಸ ತಜ್ಞರು ಮತ್ತು ಯುನೆಸ್ಕೋ ಫೆಲೋದ ಡಾ ಚೂಡಾಮಣಿ ನಂದಗೋಪಾಲ ಅವರು ನೃತ್ಯ ವಿಮರ್ಶೆಯನ್ನು ಹಾಗೂ ಖ್ಯಾತ ನಾಟಕಕಾರ ಕೆ. ವೈ. ನಾರಾಯಣಸ್ವಾಮಿ ಅವರು ನಾಟಕ ವಿಮರ್ಶೆಯನ್ನು ನಡೆಸಿಕೊಡಲಿದ್ದಾರೆ. ಅಂದು ಮಧ್ಯಾಹ್ನ ಹಿರಿಯ ಸಾಹಿತಿ ಡಾ. ಬೈರಮಂಗಳ ರಾಮೇಗೌಡ ಅವರಿಂದ ಸೌಂದರ್ಯ ಮೀಮಾಂಸೆ ಹಾಗೂ ಶಿಬಿರಾರ್ಥಿಗಳಿಂದ ಕಲಾವಿಮರ್ಶೆ ಮತ್ತು ಬರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

-ಎನ್.ಬಿ.

Leave a Reply

comments

Related Articles

error: