ಮೈಸೂರು

ಕೊಟ್ಟ ಮಾತನ್ನು ಉಳಿಸಿಕೊಂಡ ಜಿಲ್ಲಾಧಿಕಾರಿ ಡಿ.ರಂದೀಪ್ : ರೇಲಿಂಗ್ಸ್ ಬದಲಾವಣೆ

ಮೈಸೂರು,ಜು.14:- ಮೈಸೂರಿನ ಪ್ರಸಿದ್ಧ ದೇವಾಲಯ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅವೈಜ್ಞಾನಿಕವಾಗಿ ರೇಲಿಂಗ್ಸ್ ಅಳವಡಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ವೈಜ್ಞಾನಿಕವಾಗಿ ರೇಲಿಂಗ್ಸ್ ಅಳವಡಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ.8ರಂದು ಸಿಟಿಟುಡೆ ‘ ಅವೈಜ್ಞಾನಿಕವಾಗಿ ಅಳವಡಿಸಲಾದ ರೇಲಿಂಗ್ಸ್: ಹೆಚ್ಚಿನ ಅನಾಹುತಕ್ಕೂ ಮುನ್ನ ಎಚ್ಚೆತ್ತರೆ ಒಳ್ಳೆಯದು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಯನ್ನು ನೋಡಿದ ತಕ್ಷಣ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಿ.ರಂದೀಪ್ ಆಷಾಢಕ್ಕೂ ಮುನ್ನ ರೇಲಿಂಗ್ಸ್ ಬದಲಾಯಿಸಲಾಗುವುದು ಎಂದಿದ್ದರು. ಅದರಂತೆ ರೇಲಿಂಗ್ಸ್ ನ್ನು ಬದಲಾಯಿಸಿದ್ದು, ಭಕ್ತಾದಿಗಳು ಕೂಡ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಇಲ್ಲದಿದ್ದಲ್ಲಿ ಎಲ್ಲಿ ತಮ್ಮ ಮಕ್ಕಳು ಚುಚ್ಚಿಕೊಳ್ಳುತ್ತಾರೋ ಎಂದು ಕಳವಳಪಡುತ್ತಲೇ ನಿಂತುಕೊಳ್ಳಬೇಕಿತ್ತು. ಇದೀಗ  ಆ ಭಯವಿಲ್ಲದಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: