ಕರ್ನಾಟಕಪ್ರಮುಖ ಸುದ್ದಿ

ಎಎಸ್ಪಿ ವಾಹನ ಅಪಘಾತ : ಮೂವರಿಗೆ ಗಾಯ

ರಾಜ್ಯ(ಚಾಮರಾಜನಗರ)ಜು.14:- ಮುಖ್ಯಮಂತ್ರಿ ಬಂದೋಬಸ್ತ್ ನಲ್ಲಿದ್ದ ಎಎಸ್ಪಿ ಅವರು ವಾಪಸ್ ತೆರಳುವಾಗ ಅವರ ವಾಹನ  ಅಪಘಾತಕ್ಕೀಡಾಗಿದ್ದು,  ವಾಹನದಲ್ಲಿದ್ದ ಮೂವರು  ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಖ್ಯಮಂತ್ರಿ ಅವರ ಉಮ್ಮತ್ತೂರು ಕಾರ್ಯಕ್ರಮ ಮುಗಿಸಿ‌ ಹೋಗುವಾಗ ಸಂತೆಮರಳ್ಳಿ ಸಮೀಪ ಎಎಸ್ಪಿ ಅವರ ವಾಹನಕ್ಕೆ ಬೈಕೊಂದು ಅಡ್ಡ‌ ಬಂದಿದ್ದು,  ಅದನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಎಎಸ್ಪಿ ಗೀತಾ ಪ್ರಸನ್ನ, ಚಾಲಕ ನಾಗೇಶ್ ‌ಹಾಗೂ ಗನ್ ಮ್ಯಾನ್ ಸಿದ್ದರಾಜು ಎಂಬುವವರಿಗೆ ಗಾಯವಾಗಿದೆ ಎನ್ನಲಾಗಿದೆ.  ಹೆಚ್ಚಿನ ಚಿಕಿತ್ಸೆಗಾಗಿ ಎಎಸ್ಪಿ ಅವರನ್ನು ಮೈಸೂರಿಗೆ ಕಳುಹಿಸಿಕೊಡಲಾಗಿದೆ. ಆಸ್ಪತ್ರೆಗೆ ಐಜಿಪಿ ವಿಫುಲ್ ಕುಮಾರ್ ಭೇಟಿ ನೀಡಿ ಎಎಎಸ್ಪಿ ಸೇರಿದಂತೆ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು. (ಆರ್.ವಿ.ಎಸ್, ಎಸ್.ಎಚ್)

Leave a Reply

comments

Related Articles

error: