ಸುದ್ದಿ ಸಂಕ್ಷಿಪ್ತ

ವಿಚಾರ ಸಂಕಿರಣ

ಮೈಸೂರು ವಿವಿಯ ಯುವರಾಜ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಹಾಗೂ ಮೈಸೂರು ವಿಭಾಗದ ನ್ಯೂಟ್ರಿಷಿಯನ್ ಸೊಸೈಟಿ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಅ.16ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಣಿ ಬಹದ್ದೂರು ಸಭಾಂಗಣದಲ್ಲಿ “ಹವಾಮಾನ ಬದಲಾವಣೆ -ಆಹಾರ ಮತ್ತು ಕೃಷಿಯ’ ಕ್ಷೇತ್ರದ ಬದಲಾವಣೆ” ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು ಫುಡ್ ಸೈನ್ಸ್ ವಿಭಾಗದ ಡಾ.ಜಮುನಾ ಪ್ರಕಾಶ್ ಉದ್ಘಾಟಿಸುವರು. ಯುವರಾಜ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ನಂಜೇಗೌಡ ಅಧ್ಯಕ್ಷತೆ ವಹಿಸುವರು. ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶೇಖರ್ ನಾಯ್ಕ್ ಆರ್. ಉಪಸ್ಥಿತರಿರುವರು. ವಿಶೇಷ ಉಪನ್ಯಾಸಕರಾಗಿ ಖ್ಯಾತ ಕೃಷಿ ವಿಜ್ಞಾನಿ ಡಾ.ವಸಂತಕುಮಾರ ತಿಮ್ಮಕಾಪುರ ಹಾಗೂ ಕಾಲೇಜಿನ ತೋಟಗಾರಿಕೆ ವಿಭಾಗದ ಡಾ.ಜನಾರ್ದನ್ ಜಿ. ಭಾಗವಹಿಸುವರು.

Leave a Reply

comments

Related Articles

error: