ಕರ್ನಾಟಕಪ್ರಮುಖ ಸುದ್ದಿಮೈಸೂರು

ಮುಂದಿನ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಬಹುದು : ಸಿಎಂ ಸಿದ್ದರಾಮಯ್ಯ

ಮೈಸೂರು,ಜು.15:- ಮುಂದಿನ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಬಹುದು.ಹೀಗಾಗಿ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದಲ್ಲಿ ನಿಲ್ಲಲು ಬಯಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೈ ಕಮಾಂಡ್ ಅವರು ಎಲ್ಲಿ ಹೇಳುತ್ತಾರೊ ಅಲ್ಲಿ ನಿಲ್ಲುತ್ತೇನೆ.ಯತೀಂದ್ರ ರಾಜಕೀಯ ಪ್ರವೇಶವನ್ನು ಸಹಾ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಚಾಮುಂಡೇಶ್ವರಿ ಮತ್ತು ವರುಣಾ ಎರಡು ಕ್ಷೇತ್ರದ ಜನರು ನಮ್ಮನ್ನು ನಿಲ್ಲಿ ಎನ್ನುತ್ತಿದ್ದಾರೆ. ಎರಡು ಕ್ಷೇತ್ರದ ಜನರಿಗೆ ನನ್ನ ಮೇಲೆ ಪ್ರೀತಿಯಿದೆ ಎಂದರು. ರಾಜ್ಯದಲ್ಲಿ ಮೋಡ ಬಿತ್ತನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜ್ಯ ಎಲ್ಲಾ ಭಾಗದಲ್ಲಿ ಮೋಡ ಬಿತ್ತನೆ ಮಾಡಲ್ಲ. ಎಲ್ಲಿ ಮಳೆ ಕಡಿಮೆಯಾಗಿದೇಯೋ ಅಲ್ಲಿ ಮಾತ್ರ ಮೋಡ ಬಿತ್ತನೆ ಮಾಡಲಾಗುವುದು ಎಂದು ತಿಳಿಸಿದರು. ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ನನ್ನ ಹೆಸರು ಕೂಡ ಸಿದ್ದರಾಮ ಅಂತಿದೆ, ಹೀಗಾಗಿ ನಾನು ಕೂಡ ಹಿಂದುವೇ ಆಗಿದ್ದೇನೆ ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರಲ್ಲದೇ ಹಿಂದೂಗಳ ಓಲೈಕೆಗೆ ಮುಂದಾದರು. ಶಾಸಕರಾಗಿ ಆಯ್ಕೆ ಮಾಡೋರು ಜನರೇ ಹೊರತು ಕುಮಾರಸ್ವಾಮಿ ಅಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿರುಗೇಟು ನಿಡಿದ್ದಾರೆ. ಯಾರು ಯಾರನ್ನೂ ಆಯ್ಕೆ ಮಾಡಲ್ಲ. ಯಾರು ಶಾಸಕರಾಗಬೇಕು, ಯಾರು ಆಗಬಾರದು ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ. ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಯಡಿಯೂರಪ್ಪ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಬೇಡಿ ಎಂದರು. ಆದರೆ ಜನ ಬಿಟ್ಟರೇ ಎಂದು ಪ್ರಶ್ನಿಸಿದರು. ದಕ್ಷಿಣ ಕನ್ನಡದಲ್ಲಿ ಗಲಭೆ ನಿಯಂತ್ರಣಕ್ಕೆ ಬರಬೇಕಾದರೆ  ರಾಜಕಾರಣಿಗಳು ಹಾಗೂ ಮಾಧ್ಯಮಗಳು ಸುಮ್ಮನಿರಬೇಕು ಎನ್ನುವ ಮೂಲಕ ಗಲಭೆಗೆ ಮಾಧ್ಯಮಗಳು ಸಹ ಕಾರಣವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: