ಮನರಂಜನೆ

‘ರಾಜು ಕನ್ನಡ ಮೀಡಿಯಂ’ ಚಿತ್ರತಂಡ ಜೊತೆ ನಟಿ ಆವಂತಿಕಾ ಶೆಟ್ಟಿ ರಾಜಿ

ಬೆಂಗಳೂರು, ಜಲೈ.15: ‘ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ಮಾಪಕ ಸುರೇಶ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ ತಮ್ಮನ್ನು ಚಿತ್ರದಿಂದ ಹೊರಗಿಟ್ಟು ತಮ್ಮ ಬದಲಿಗೆ ಬೇರೊಬ್ಬರ ವಾಯ್ಸ್ ಡಬ್ಬಿಂಗ್ ಗೆ ಪ್ರಯತ್ನ ನಡೆದಿದೆ ಎಂದು ನಟಿ ಆವಂತಿಕಾ ಶೆಟ್ಟಿ ಆರೋಪದಿಂದ  ನಿರ್ಮಾಪಕ ಸುರೇಶ್  ನಿರಾಳ.

‘ರಾಜು ಕನ್ನಡ ಮೀಡಿಯಂ’ ಚಿತ್ರದಿಂದ ಹೊರ ಉಳಿದಿದ್ದ ನಟಿ ಆವಾಂತಿಕಾ ಶೆಟ್ಟಿ ಇದೀಗ ರಾಜಿಯಾಗಿದ್ದು, .ಫಿಲಂ ಛೇಂಬರ್ ಮಧ್ಯಸ್ಥಿಕೆ ನಂತರ ಆವಂತಿಕಾ ತಾನು ಹೂಡಿದ್ದ ಎಲ್ಲಾ ದೂರುಗಳನ್ನು ಹಿಂಪಡೆಯಲು ತೀರ್ಮಾನಿಸಿದರು. ಇದೀಗ ಎಲ್ಲಾ ವಿವಾದಗಳೂ ಸುಖಾಂತ್ಯ ಕಂಡಿದೆ. ‘ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ಮಾಪಕ ಸುರೇಶ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ ತಮ್ಮನ್ನು ಚಿತ್ರದಿಂದ ಹೊರಗಿಟ್ಟು ತಮ್ಮ ಬದಲಿಗೆ ಬೇರೊಬ್ಬರ ವಾಯ್ಸ್ ಡಬ್ಬಿಂಗ್ ಗೆ ಪ್ರಯತ್ನ ನಡೆದಿದೆ ಎಂದು ನಟಿ ಆವಾಂತಿಕಾ ಶೆಟ್ಟಿ ಆರೋಪಿಸಿದ್ದರು. ತಮ್ಮ ಬದಲಿಗೆ ಬೇರೊಬ್ಬರ ವಾಯ್ಸ್ ಡಬ್ಬಿಂಗ್ ಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇನ್ನೊಂದೆಡೆ ನಿರ್ಮಾಪಕ ಸುರೇಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ವಿವಾದ ಬಗೆಹರಿಸುವಂತೆ ಕೋರಿದ್ದರು. ಇವರಿಬ್ಬರ ಜಗಳ ಬಗೆಹರಿಸಲು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಮತ್ತೊಮ್ಮೆ ಸಂಧಾನ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಆವಂತಿಕಾ ಚಿತ್ರೋದ್ಯಮದ ಗಣ್ಯರ ಸಲಹೆಗೆ ಒಪ್ಪಿಕೊಂಡು, ತಾನು ಸುರೇಶ ವಿರುದ್ಧ ಹೂಡಿರುವ ಎಲ್ಲಾ ಕೇಸ್ ಗಳನ್ನೂ ಹಿಂಪಡೆಯುವುದಾಗಿ ಹೇಳಿದರು. ಇದೀಗ ಕನ್ನಡ ಮೀಡಿಯಂ ರಾಜು ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿದ್ದ ಬಲು ದೊಡ್ಡ ವಿವಾದವೊಂದು ಬಗೆಹರಿದಂತಾಗಿದೆ.( ವರದಿ:ಪಿ.ಜೆ )

Leave a Reply

comments

Related Articles

error: