ಮೈಸೂರು

ಪ್ರತಿಯೊಬ್ಬರೂ ಮೈಸೂರು ನಗರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು: ಮೇಯರ್ ರವಿಕುಮಾರ್ ಎಂ.ಜೆ

ಮೈಸೂರು, ಜು.15: ಮೈಸೂರಿನ ಡಿ.ಟಿ.ಎಸ್ ಫೌಂಡೇಶನ್ ವತಿಯಿಂದ ತಾಯಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯ ಅಂಗವಾಗಿ  ಚಾಮುಂಡಿ ಬೆಟ್ಟದ ತಪ್ಪಲಿನ ಪ್ರದೇಶ ಹಾಗೂ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸುವ ಮೂಲಕ ‘ಸ್ವಚ್ಛ ಮೈಸೂರು ಅಭಿಯಾನ’ ವನ್ನು ಹಮ್ಮಿಕೊಳ್ಳಲಾಯಿತು.

ಅಭಿಯಾನಕ್ಕೆ ಚಾಲನೆ ನೀಡಿದ ಮೈಸೂರಿನ ಮಹಾಪೌರ  ಎಂ.ಜೆ ರವಿಕುಮಾರ್ ಮಾತನಾಡಿ,  ರಾಜಮಹಾರಾಜರ ಕೊಡುಗೆಯಿಂದ ಮೈಸೂರು ಪಾರಂಪರಿಕ ನಗರದ ಜೊತೆಯಲ್ಲೇ ಸ್ವಚ್ಛ ನಗರಿ ಎಂಬ ಬಿರುದು ಪಡೆದಿದೆ.  ಆದರೆ ಪ್ರತಿಯೊಬ್ಬ ಮೈಸೂರಿಗರು ಮೈಸೂರು ನಗರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಮುಂದಾಗಬೇಕು.   ವಾರದಲ್ಲಿ 1 ದಿನ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಿದರೆ ಡೆಂಗ್ಯೂವಿನಂತಹ ಮಾರಣಾಂತಿಕ ಖಾಯಿಲೆಗಳು ಸುಳಿಯುವುದಿಲ್ಲ ಎಂದರು. ನಂತರ ಬಿಜೆಪಿ ಮುಖಂಡ ಸ್ವಚ್ಛಭಾರತ್ ರೂವಾರಿ ಹೆಚ್. ವಿ. ರಾಜೀವ್ ಮಾತನಾಡಿ,  ಇಂದಿನ ಯುವಪೀಳಿಗೆ ಸಾಮಾಜಿಕ ಕಾಳಜಿಯಿಂದ ನರೇಂದ್ರ ಮೋದಿಯವರ ಸ್ವಚ್ಚಭಾರತ ಅಭಿಯಾನದ ಜನಾಂದೋಲನದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ.  ನಮ್ಮ ಮನಸ್ಸಿನ ಸ್ವಚ್ಛತೆಗೆ ಯೋಗ, ಧ್ಯಾನ ಸಹಕಾರಿಯಾದರೆ  ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಕರೆ ನೀಡಿದರು.

ಸ್ವಚ್ಛಭಾರತ ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಡಿ.ಟಿ.ಎಸ್ ಫಂಡೇಶನ್ ಸಂಸ್ಥಾಪಕರಾದ  ಡಿ. ಟಿ.ಪ್ರಕಾಶ್ ರವರು ಮಾತನಾಡಿ,  ಸ್ವಚ್ಚಭಾರತದ ಪರಿಕಲ್ಪನೆ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಆದರ್ಶದ ಸಂದೇಶವಾಗಿದೆ.  ಸಮಾಜಕ್ಕೆ ಅನಾವಶ್ಯಕವಾದ ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ತ್ಯಾಜ್ಯ ಕಲುಷಿತವಾಗಿ ಮಾರಣಾಂತಿಕ ರೋಗಗಳು ಹರಡುತ್ತವೆ.  ಇದನ್ನು ತಡೆಗಟ್ಟಬೇಕಾದರೆ ಮೈಸೂರಿಗರು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು.  ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು  ಸ್ವಚ್ಛವಾಗಿಟ್ಟುಕೊಳ್ಳಬೇಕು.  ಮುಂದಿನ ದಿನಗಳಲ್ಲಿ ಡಿ ಟಿ ಎಸ್ ಫೌಂಡೇಶನ್ ವತಿಯಿಂದ ‘ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಸಂರಕ್ಷಿಸಿ’ ಎಂಬ ಅರಿವು ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೈಸೂರಿನ ಮಹಾಪೌರ ಎಂ.ಜೆ ರವಿಕುಮಾರ್, ಬಿಜೆಪಿ ನಗರ ಪ್ರಧಾನಕಾರ್ಯದರ್ಶಿ ಹೆಚ್.ವಿ ರಾಜೀವ್, ಡಿಟಿಎಸ್ ಫೌಂಡೇಶನ್ ಅಧ್ಯಕ್ಷ ಡಿ.ಟಿ ಪ್ರಕಾಶ್, ವಿಪ್ರ ಹಿರಿಯ ಮುಖಂಡ ಕೆ ರಘುರಾಂ ವಾಜಪೇಯಿ, ನಗರಪಾಲಿಕೆ ಸದಸ್ಯ ಮಾವಿ ರಾಮಪ್ರಸಾದ್, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಉಪಾಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ, ಪ್ರಧಾನಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್, ರಂಗನಾಥ್ ಲಕ್ಷ್ಮೀದೇವಿ, ಕೇಬಲ್ ಮಹೇಶ್, ರಾಜಗೋಪಾಲಚಾರ್, ಕಡಕೊಳ ಜಗದೀಶ್  ಭಾಗವಹಿಸಿದ್ದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: