ಪ್ರಮುಖ ಸುದ್ದಿಮೈಸೂರು

ಪೆಟ್ರೋಲ್, ಡೀಸೆಲ್ ದರ ಏರಿಕೆ

ಶನಿವಾರ (ಅ.15) ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್`ಗೆ 1.34 ರೂಪಾಯಿ ಹಾಗೂ ಡೀಸೆಲ್ ದರ 2.37 ರೂ ಏರಿಕೆ ಕಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಕಂಡ ಕಾರಣ ತೈಲ ಕಂಪನಿಗಳು ಹೊಸ ದರ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರದ ತೆರಿಗೆ ಇದರಲ್ಲಿ ಸೇರಿಲ್ಲ. ಹೊಸ ದರಗಳ ಅನ್ವಯ, ದೆಹಲಿಯಲ್ಲಿ ಲೀಟರ್ ಪೆಟ್ರೋಲ್`ಗೆ 66.45 ರೂ; ಡೀಸೆಲ್`ಗೆ 55.38 ರೂ.ಗಳಾಗಿದೆ.

ಕೋಲ್ಕತಾದಲ್ಲಿ ಲೀಟರ್ ಪೆಟ್ರೋಲ್ 69.08 ರೂ; ಮುಂಬೈನಲ್ಲಿ 72.83, ಚೆನ್ನೈನಲ್ಲಿ 65.96 ರೂಪಾಯಿಗಳಾಗಿದೆ.

ಡೀಸೆಲ್ ದರ ಕೊಲ್ಕತಾದಲ್ಲಿ ಲೀಟರ್`ಗೆ 57.64 ರೂ; ಮುಂಬೈನಲ್ಲಿ 61.05 ರೂ; ಚೆನ್ನೈನಲ್ಲಿ 56.95 ರೂಗಳಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪ್ (ಐಓಸಿ) ಪ್ರಕಟಣೆ ತಿಳಿಸಿದೆ.

ಅಂತಾರಾಷ್ಟ್ರೀಯ ತೈಲ ಬೆಲೆ ಬ್ಯಾರಲ್ ವೊಂದಕ್ಕೆ 50 ಡಾಲರ್ ಏರಿಕೆ ಕಂಡಿದೆ. ಭಾರತದಲ್ಲಿ ತೈಲ ಬೆಲೆ ನಿಯಂತ್ರಣವನ್ನು ಸರ್ಕಾರ ತೈಲ ಕಂಪನಿಗಳಿಗೇ ವಹಿಸಿದ್ದು ಅಂತಾರಾಷ್ಟ್ರೀಯ ದರದಲ್ಲಿನ ಏರಿಳಿತದಂತೆ ಭಾರತದಲ್ಲಿ ತೈಲಕಂಪನಿಗಳು ಬೆಲೆ ನಿರ್ಧರಿಸುತ್ತಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿನ ರೂಪಾಯಿ ಮೌಲ್ಯ, ತೈಲ ಬೆಲೆಯ ಸರಾಸರಿ ಏರಿಳಿತ ಮತ್ತು ವಿದೇಶಿ ವಿನಿಯಮಯ ಪ್ರಮಾಣ ಆಧರಿಸಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಪ್ರತಿ 15 ದಿನಕ್ಕೊಮ್ಮೆ ತೈಲ ದರ ಪರಿಷ್ಕರಣೆ ಮಾಡುತ್ತಿವೆ.

ಈ ಮಾನದಂಡದಂತೆ ತೈಲ ಕಂಪನಿಗಳು ಇದೇ ಅ.4ರಲ್ಲಿ ತೈಲ ದರ ಪರಿಷ್ಕರಣೆ ಮಾಡಿ ಪೆಟ್ರೋಲ್`ಗೆ 14 ಪೇಸೆ, ಡೀಸೆಲ್`ಗೆ 10 ಪೈಸೆ ಏರಿಕೆ ಮಾಡಿದ್ದವು.

Leave a Reply

comments

Related Articles

error: