ದೇಶಪ್ರಮುಖ ಸುದ್ದಿ

ಹುತಾತ್ಮ ಸೈನಿಕರ ಗೌರವಾರ್ಥ ಒಡಿಶಾ ಸಿಎಂ ಹುಟ್ಟುಹಬ್ಬ ಸಂಭ್ರಮ ರದ್ದು

ಭುಬನೇಶ್ವರ್: ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲ ಜಿಲ್ಲೆಯ ಉರಿಯಲ್ಲಿ ಉಗ್ರಗಾಮಿ ದಾಳಿಯಲ್ಲಿ ಮೃತಪಟ್ಟ ಯೋಧರ ಗೌರವಾರ್ಥ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತಮ್ಮ ಹುಟ್ಟುಹಬ್ಬ ಸಂಭ್ರಮಾಚರಣೆಯನ್ನು ರದ್ದುಪಡಿಸಿದ್ದಾರೆ.

ಭಾನುವಾರ 71ನೇ ಸಿಎಂ ಹುಟ್ಟುಹಬ್ಬವಾಗಿದ್ದು, ಅಂದು ರಾಜ್ಯಾದ್ಯಂತ ಯಾವುದೇ ಸಂಭ್ರಮಾಚರಣೆ ಇರುವುದಿಲ್ಲವೆಂದು ಒಡಿಶಾ ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು 2011, 2013 ಮತ್ತು 2014 ರಲ್ಲೂ ಸಹ ರಾಜ್ಯದಲ್ಲಿ ಉಂಟಾಗಿದ್ದ ನೆರೆ, ಚಂಡಮಾರುತಗಳಂತಹ ಪ್ರಾಕೃತಿಕ ವೈಪರೀತ್ಯಗಳ ಕಾರಣ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ರದ್ದುಪಡಿಸಿದ್ದರು.

ಕಳೆದ ವರ್ಷವೂ ಸಹ ಗ್ಯಾಸ್ ಬಲೂಲ್ ಸಿಡಿದು ತಮ್ಮ ನಿವಾಸದ ಸಮೀಪ ಹುಟ್ಟುಹುಬ್ಬದ ಶುಭಾಶಯ ಕೋರಲು ನೆರೆದಿದ್ದ ಮಕ್ಕಳು ಗಾಯಗೊಂಡಿದ್ದ ಕಾರಣದಿಂದ ಸಿಎಂ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದ್ದರೆಂಬುದು ಇಲ್ಲಿ ಗಮನಾರ್ಹ.

Leave a Reply

comments

Related Articles

error: