ಲೈಫ್ & ಸ್ಟೈಲ್

ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗ

ದಢೂತಿ ಶರೀರದವರು ತಮ್ಮ ದೇಹದ ತೂಕವನ್ನು ಕಳೆದುಕೊಳ್ಳಲು ಇಷ್ಟಪಡುತ್ತಾರೆ. ಅದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಸರಳ ಉಪಾಯ ಇಲ್ಲಿದೆ.

ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಜಾಸ್ತಿಯಿದ್ದು, ಅದರ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಇದು ದೇಹದಲ್ಲಿ ಮೆಟಾಬಾಲಿಸಂನ್ನು ಹೆಚ್ಚಿಸಿ ತೂಕ ಕಡಿಮೆಗೊಳ್ಳಲು ಸಹಕರಿಸುತ್ತದೆ.

ಸೌತೆಕಾಯಿ: ಇದರಲ್ಲಿ ಫೈಬರ್ ಹೆಚ್ಚಿನಂಶದಲ್ಲಿದ್ದು, ಕ್ಯಾಲೋರಿ ಕಡಿಮೆ ಇರುತ್ತದೆ. ಕಿಣ್ವ, ವಿಟಾಮಿನ್ ಮತ್ತು ಮಿನರಲ್ಸ್ ಇದೆ.

ಸೀಬೆ ಹಣ್ಣು: ಶರೀರಕ್ಕೆ ಪೋಷಣೆ ನೀಡುವ ಈ ಹಣ್ಣಿನಲ್ಲಿ ಫೈಬರ್ ಹೆಚ್ಚಿನಂಶದಲ್ಲಿದ್ದು ಪಚನಕ್ರಿಯೆಗೆ ಸಹಾಯಕವಾಗಿದೆ. ವಿಟಮಿನ್ ಮತ್ತು ಮಿನರಲ್ಸ್ ಹೇರಳವಾಗಿದೆ. ಮಧುಮೇಹಿಗಳೂ ಇದನ್ನು ಸೇವಿಸಬಹುದು. ಈ ಮೇಲಿನವುಗಳ ನಿಯತ ಸೇವನೆಯಿಂದ ಶರೀರದ ತೂಕವನ್ನು ಇಳಿಸಿಕೊಳ್ಳಬಹುದು.

Leave a Reply

comments

Related Articles

error: