ಮೈಸೂರು

ದಯಾನಂದ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಮೈಸೂರಿನ ಜನರ ಸಹಕಾರ ನನಗೆ ಸಾಕಷ್ಟು ದೊರಕಿದ್ದು, ಮೈಸೂರಿನಲ್ಲಿ ಕೆಲಸ ಮಾಡಿದ ಅವಧಿ ನನಗೆ ಸಂಪೂರ್ಣ ತೃಪ್ತಿ ತಂದಿದೆ ಎಂದು ಗುಪ್ತದಳದ ಐಜಿಪಿಯಾಗಿ ವರ್ಗಾವಣೆಗೊಂಡ ಬಿ.ದಯಾನಂದ ತಿಳಿಸಿದರು. ಮೈಸೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಪೊಲೀಸ್ ಭವನದ ಆವರಣದಲ್ಲಿ ನಗರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಇಲಾಖೆಯ ಸಿಬ್ಬಂದಿಗಳ ಶ್ರಮದಿಂದ ನನ್ನ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಕೂಡ ಕಡಿಮೆಯಾಗಿರುವುದು ನನಗೆ ತೃಪ್ತಿ ನೀಡಿದೆ. ಮೈಸೂರಿನ ಜನತೆ ಸಾಕಷ್ಟು ಸಹಕಾರವನ್ನು ನೀಡಿದ್ದಾರೆ ಎಂದು ಸ್ಮರಿಸಿದರು.

ದಕ್ಷಿಣ ವಲಯ ಐಜಿಪಿ ಬಿ.ಕೆ. ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ದಯಾನಂದ ಅವರಿಗೆ ಹಾರ ಹಾಕಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಡಿ. ರಂದೀಪ್ ಮಾತನಾಡಿ ಕಮಿಷನರ್ ಜೊತೆಗಿನ ಒಡನಾಟ ಒಂದೆರಡು ತಿಂಗಳಿನದು. ಆದರೂ ಅವರು ನೀಡಿದ ಸಹಕಾರ ಮರೆಯಲಾಗದ್ದು ಎಂದರು.

ವೇದಿಕೆಯಲ್ಲಿ ಡಿ.ಸಿ.ಪಿ. ರುದ್ರಮುನಿ, ಪಾಲಿಕೆ ಆಯುಕ್ತ ಜಿ. ಜಗದೀಶ್, ಡಿಸಿಪಿ ಎಚ್.ಟಿ. ಶೇಖರ್ ಉಪಸ್ಥಿತರಿದ್ದರು.

Leave a Reply

comments

Related Articles

error: