ಮೈಸೂರು

ಮಳವಳ್ಳಿ ಪುರಸಭೆ : ಆಶ್ರಯ ಯೋಜನೆ ಖಾತಾ ದಾಖಲಿಸಲು ಮನವಿ

ಮಳವಳ್ಳಿ, ಜುಲೈ 16 : ಪುರಸಭಾ ವ್ಯಾಪ್ತಿಯ ಮಾರೆಹಳ್ಳಿ ಭೀರೇಶ್ವರ ದೇವಸ್ಥಾನದ ಹತ್ತಿರ 8.10 ಎಕರೆ ಸ್ವತ್ತಿನಲ್ಲಿ ಆಶ್ರಯ ಯೋಜನೆಯಡಿ ಹಕ್ಕು ಪತ್ರ ವಿತರಿಸಿದ್ದು, ಹಕ್ಕು ಪತ್ರ ಪಡೆದಿರುವವರ ಹೆಸರುಗಳಿಗೆ ಖಾತಾ ದಾಖಲಿಸಬೇಕಾಗಿರುವುದರಿಂದ ಜುಲೈ 7 ರಿಂದ 22 ರ ಒಳಗೆ ಹಕ್ಕು ಪತ್ರ ಪಡೆದಿರುವವರು ಮೂಲ ಹಕ್ಕು ಪತ್ರದ ವಿವರ ಮತ್ತು ಕುಟುಂಬದ ಸದಸ್ಯರ ವಿವರ ಮತ್ತು ಅಗತ್ಯ ದಾಖಲಾತಿಗಳನ್ನು ಪೂರ್ಣ ಮಾಹಿತಿಯೊಂದಿಗೆ ಪುರಸಭಾ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಈ ದಾಖಲೆಗಳನ್ನು ಪರಿಶೀಲಿಸಿ ಅರ್ಹತೆಯುಳ್ಳ ಫಲಾನುಭವಿಗಳಿಗೆ ಖಾತಾ ದಾಖಾಲಿಸಲು ಕ್ರಮ ವಹಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಗಳಾದ ಎಸ್.ಡಿ.ಮಂಜುನಾಥ್ ತಿಳಿಸಿದ್ದಾರೆ.
-ಎನ್.ಬಿ.

Leave a Reply

comments

Related Articles

error: