ಪ್ರಮುಖ ಸುದ್ದಿಮೈಸೂರು

ಶ್ರೀನಿವಾಸ್ ಪ್ರಸಾದ್ ಕರೆತರಲು ಜೆಡಿಎಸ್-ಬಿಜೆಪಿ ಕಸರತ್ತು

ಅಕ್ಟೋಬರ್ 17 ರಂದು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ತಮ್ಮ ಪಕ್ಷಕ್ಕೆ ಕರೆತರಲು ಬಿಜೆಪಿ, ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯವಾಗಿ ಜನಬೆಂಬಲದೊಂದಿಗೆ ಗುರುತಿಸಿಕೊಂಡಿದ್ದು, ಪಕ್ಷಕ್ಕೇನಾದರೂ ಬಂದರೆ ಮೈಸೂರಿನಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿಸಿಕೊಳ್ಳಬಹುದೆನ್ನುವ ನಿಲುವು ಬಿಜೆಪಿ ಹಾಗೂ ಜೆಡಿಎಸ್ ನದ್ದು.

ಏತನ್ಮಧ್ಯೆ ಕೇಂದ್ರದ ಗೃಹ ಸಚಿವ ರಾಜನಾಥಸಿಂಗ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿಯವರಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ವಿಚಾರಿಸಿ ಬರುವಂತೆ ತಿಳಿಸಿದ್ದಾರೆ ಎನ್ನಲಾಗಿದ್ದು, ಅವರ ಆಣತಿಯಂತೆ ಶನಿವಾರ ಅರವಿಂದ ಲಿಂಬಾವಳಿ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಲಿಂಬಾವಳಿ ಅವರು ಇದೊಂದು ಸೌಹಾರ್ದಯುತ ಭೇಟಿಯಷ್ಟೆ. ಪ್ರಸಾದ್ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಹೋಗಿರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಶ್ರೀನಿವಾಸ್ ಈ ಕುರಿತು ಪ್ರತಿಕ್ರಿಯೆ ನೀಡಿ ಬಿಜೆಪಿ ನಾಯಕರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಲು ಭೇಟಿ ಮಾಡಿಲ್ಲ. ಇದೊಂದು ಸೌಹಾರ್ದ ಭೇಟಿ. ನನ್ನ ಮುಂದಿನ ನಡೆ ಏನಿದ್ದರೂ ಅದು ರಾಜೀನಾಮೆ ನಂತರವೇ. ಬೆಂಬಲಿಗರೊಂದಿಗೆ ಈ ಕುರಿತು ಚರ್ಚಿಸಿ ಹೆಜ್ಜೆ ಇಡುತ್ತೇನೆ ಎಂದಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಅವರ ನಿಲುವು ಇನ್ನೂ ನಿಗೂಢವಾಗಿದ್ದು, ರಾಜೀನಾಮೆಯ ನಂತರವಷ್ಟೇ ಅವರ ನಿರ್ಧಾರ ತಿಳಿದು ಬರಬೇಕಿದೆ.

 

Leave a Reply

comments

Related Articles

error: