ಮೈಸೂರು

ಬೇಕರಿಯಲ್ಲಿ ಕೇಕ್ ಖರೀದಿಗೂ ಮುನ್ನ ಪರಿಶೀಲಿಸಿ ಹುಳುಗಳಿರಬಹುದು

ಮೈಸೂರು,ಜು.17:- ಬೇಕರಿ ತಿನ್ನೋದಕ್ಕೆ ಎಲ್ಲಾದರೂ ಬೇಕರಿ ಶಾಪ್ ಗಳಿಗೆ ಹೋಗೋಕು ಮೊದಲು ನಿಮ್ಮ ಆರೋಗ್ಯದ ಕುರಿತು ಎಚ್ಚರ ವಹಿಸಿ. ಯಾಕೆಂದರೆ ಹುಳು ಹುಪ್ಪಡಿಗಳಿರಬಹುದು ಎಚ್ಚರ. ಸರಸ್ವತಿಪುರಂನಲ್ಲಿರುವ ಬೇಕ್ ಪಾಯಿಂಟ್ ಬೇಕರಿ ಮಳಿಗೆಯಲ್ಲಿನ ಕೇಕೊಂದರಲ್ಲಿ ಹುಳುಹುಪ್ಪಡಿಗಳು ಪತ್ತೆಯಾಗಿವೆ.

ತುಂಬಾ ವರ್ಷಗಳಿಂದ ಸರಸ್ವತಿಪುರಂನಲ್ಲಿರುವ ಬೇಕ್ ಪಾಯಿಂಟ್ ನಲ್ಲಿ ಗ್ರಾಹಕರೊಬ್ಬರು ಕೇಕ್ ಖರೀದಿಗೆಂದು ಬಂದಿದ್ದರು. ಕೇಕ್ ನ್ನು ತೆರೆದು ನೋಡಲಾಗಿದೆ. ಅದರಲ್ಲಿ ಹುಳುಗಳು ಮೊಟ್ಟೆ ಇಟ್ಟಿದ್ದು, ಮರಿಗಳು ಹೊರಬರುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಹಕರು ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ರಿಗೆ, ಪಾಲಿಕೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಅನಾರೋಗ್ಯ ಕಾಡುತ್ತಿದ್ದು ಈ ರೀತಿಯ ತಿಂಡಿ ತಿನಿಸುಗಳನ್ನು ತಿಂದಲ್ಲಿ ಮತ್ತಷ್ಟು ರೋಗ ಉಲ್ಬಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: