ಕರ್ನಾಟಕಮೈಸೂರು

ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಐಟಿ ಕ್ವಿಝ್

ಐಟಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಮತ್ತು ರಾಜ್ಯದ ಐಟಿ, ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಭಾರತದ 5 ರಾಜ್ಯಗಳಲ್ಲಿ 8ರಿಂದ 12ನೇ ತರಗತಿಯ ಗ್ರಾಮೀಣ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ತಂತ್ರಜ್ಞಾನ ಮತ್ತು ಅದರ ಮಹತ್ವ ತಿಳಿಸಲು ಸೆಪ್ಟೆಂಬರ್-ನವೆಂಬರ್ ತಿಂಗಳಿನಲ್ಲಿ ಐಟಿ ಕ್ವಿಝ್ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮವು ಕರ್ನಾಟಕ, ಗುಜರಾತ್, ಮಧ್ಯಪ್ರದೇಶ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಛತ್ತೀಸ್‍ಗಡ ರಾಜ್ಯಗಳಲ್ಲಿ ನಡೆಯಲಿದೆ. ಸಣ್ಣ ನಗರ-ಪಟ್ಟಣಗಳ ವಿದ್ಯಾರ್ಥಿಗಳನ್ನು ಮತ್ತು ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಲಾಗಿದೆ ಎಂದು ರಾಜ್ಯದ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ತಿಳಿಸಿದ್ದಾರೆ.

ಕಳೆದ 16 ವರ್ಷಗಳಿಂದಲೂ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಕ್ವಿಝ್‍ನಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಬೆಂಗಳೂರಿನ ಟಿಸಿಎಸ್ ಮುಖ್ಯಸ್ಥ ನಾಗರಾಜ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಸೆಪ್ಟೆಂಬರ್  14ಕ್ಕೆ, ಜಿಲ್ಲಾ ಮಟ್ಟದ್ದು ಸೆಪ್ಟೆಂಬರ್ 24 ಕ್ಕೆ ನಡೆಯಲಿದ್ದು, ವಲಯ ಮಟ್ಟದಲ್ಲಿ ಮೂರು ವಿಭಾಗಗಳನ್ನು ಮಾಡಲಾಗಿದೆ. ಅಕ್ಟೋಬರ್ 18ರಂದು ಧಾರವಾಡದಲ್ಲಿ, 20ರಂದು ಮೈಸೂರಿನಲ್ಲಿ, 22ರಂದು ತುಮಕೂರಿನಲ್ಲಿ ನಡೆಯಲಿದೆ. ಅಂತಿಮ ಸುತ್ತಿನ(ಫೈನಲ್) ಪರಿಕ್ಷೆಯು ನವಂಬರ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳು ಉಚಿತವಾಗಿ ಇದರಲ್ಲಿ ಭಾಗವಹಿಸಬಹುದು. ಪಾಲಿಕೆ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿಗಳು ಭಾಗವಹಿಸುವಂತಿಲ್ಲ. ಪ್ರಾದೇಶಿಕ ವಿಜೇತರಿಗೆ 10 ಸಾವಿರ ರೂ, ರನ್ನರ್ ಅಪ್ 7 ಸಾವಿರ ರೂ. ನಗದು ಬಹುಮಾನವಿದೆ. ರಾಜ್ಯ ವಿಜೇತರಿಗೆ 1 ಲಕ್ಷ ರೂ, ಮತ್ತು ರನ್ನರ್ ಅಪ್‍ಗೆ 50 ಸಾವಿರ ರೂ. ನಗದು ಬಹುಮಾನವಿದೆ. ಕ್ವಿಝ್ ಮನೋರಂಜನೆ, ಪುಸ್ತಕಗಳು, ಸಂಗೀತ, ಮಲ್ಟಿಮಿಡಿಯಾ, ಸಿನಿಮಾ, ಅಂತರ್ಜಾಲ, ಬ್ಯಾಂಕಿಂಗ್, ಶಿಕ್ಷಣ, ಪರಿಸರ, ಉದ್ಯಮ, ವೆಬ್ ಸೈಟ್, ಇತಿಹಾಸ, ಸಾಫ್ಟ್ ವೇರ್, ಇನ್ನಿತರ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ.

ಇಸವಿ 2000 ದಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಇದೀಗ 13 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಿದೆ. ಹೆಚ್ಚಿನ ಮಾಹಿತಿಗಾಗಿ ಹ್ಯಾರಿ ಪಿಂಟೋ ಮೊಬೈಲ್ ದೂರವಾಣಿ ಸಂಖ್ಯೆ 9731901188 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: