ಕರ್ನಾಟಕ

ಚಿಕಿತ್ಸೆ ಫಲಕಾರಿಯಾಗದೆ ಖೈದಿ ಸಾವು

ರಾಜ್ಯ(ಮಂಗಳೂರು)ಜು.17:- ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಖೈದಿಯೋರ್ವ ಸಾವನ್ನಪ್ಪಿದ ಘಟನೆ ಮಂಗಳೂರು ವೆನ್ಲಾಕ್ ಆಸ್ಪತ್ರೆ ಯಲ್ಲಿನಡೆದಿದೆ.

ಮೃತ ಖೈದಿಯನ್ನು ಕಾಸರಗೋಡಿನ ಉದಯಕುಮಾರ್ ರೈ ಎಂದು ಹೇಳಲಾಗಿದೆ. ಈತ ಮಂಗಳೂರು ಜಿಲ್ಲಾ  ಕಾರಗೃಹದಲ್ಲಿ ಬಂಧಿಯಾಗಿದ್ದ.  ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉರ್ವ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: