ಮೈಸೂರು

ನೇಮಕ ಪ್ರಕ್ರಿಯೆ ತಡೆಹಿಡಿಯುವಂತೆ ಮೈಸೂರು ವಿವಿಗೆ ಸರಕಾರದ ಆದೇಶ

ಯುಜಿಸಿ ಮತ್ತು ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸಿ ಸಹಾಯಕ ಉಪನ್ಯಾಸಕರ ಹುದ್ದೆಗೆ ನೇಮಕ ಪ್ರಕ್ರಿಯೆ ಆರಂಭಿಸಿದ್ದ ಯುವರಾಜ ಕಾಲೇಜು ಆಡಳಿತ ಮಂಡಳಿಗೆ ಮತ್ತೆ ಹಿನ್ನಡೆಯಾಗಿದೆ. 48 ಸಹಾಯಕ ಪ್ರೊಫೆಸರ್ ಹುದ್ದೆಗಳ ನೇಮಕವನ್ನು ತಡೆಹಿಡಿಯುವಂತೆ ಉನ್ನತ ಶಿಕ್ಷಣ ಇಲಾಖೆಯು ಮೈಸೂರು ವಿಶ್ವವಿದ್ಯಾನಿಯಕ್ಕೆ ನೋಟಿಸ್ ನೀಡಿದೆ.

ನೇಮಕ ಪ್ರಕ್ರಿಯೆ ನಡೆಸದಂತೆ ಕಾಲೇಜಿಗೆ ಉನ್ನತ ಶಿಕ್ಷಣ ಇಲಾಖೆಯು ನೋಟಿಸ್ ನೀಡಿತ್ತು. ಆದಾಗ್ಯೂ ಈ ಆದೇಶವನ್ನು ಉಲ್ಲಂಘಿಸಿದ ಯುವರಾಜ ಕಾಲೇಜು ಆಡಳಿತ ಮಂಡಳಿ ಸಂದರ್ಶನವನ್ನು ಕೂಡ ನಡೆಸಿತ್ತು. ಯುಜಿಸಿ ಮತ್ತು ರಾಜ್ಯ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ನೇಮಕ ಪ್ರಕ್ರಿಯೆ ಆರಂಭಿಸಿರುವ ಯುವರಾಜ ಕಾಲೇಜು ಈ ಕೂಡಲೇ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಆರ್. ಸೋಮಶೇಖರ್ ಅವರು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಕೆ.ಎಸ್. ರಂಗಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಆದೇಶ ಉಲ್ಲಂಘಿಸಿ ಸಂದರ್ಶನ ನಡೆಸಿದ ಬಗ್ಗೆ ಸಂಪೂರ್ಣ ವಿವರವಾದ ವರದಿ ನೀಡುವಂತೆ ವಿವಿಗೆ ಸರಕಾರ ಸೂಚಿಸಿದೆ. ಕಾಲೇಜಿನಿಂದ ಸಂದರ್ಶನ ನಡೆಯುತ್ತಿರುವ ಬಗ್ಗೆ ಯುವರಾಜ ಕಾಲೇಜಿನ ತಾತ್ಕಾಲಿಕ ಉಪನ್ಯಾಸಕರು ಹೈಕೋರ್ಟ್‍ಗೆ ದೂರು ನೀಡಿದ್ದರು. ಮುಂದಿನ ವಿಚಾರಣೆ ನ. 10 ರಂದು ನಡೆಯಲಿದೆ.

Leave a Reply

comments

Related Articles

error: