
ಮೈಸೂರು
ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ಬೀದಿ ನಾಟಕ ಪ್ರದರ್ಶನ
ಮೈಸೂರು,ಜು.17:- ನೆಲೆ ಹಿನ್ನೆಲೆ ಸಂಸ್ಥೆಯ ವತಿಯಿಂದ ಸಮಾನತೆಯ ಅನ್ವೇಷಣೆ ವಿಷಯ ಆಧಾರಿತ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ಬೀದಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಮಾನಸ ಗಂಗೋತ್ರಿ ರೌಂಡ್ ಕ್ಯಾಂಟೀನ್ ಮುಂಭಾಗ ನಡೆದ ಬೀದಿನಾಟಕದಲ್ಲಿ ಪಾಲ್ಗೊಂಡ ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ ಮಾತನಾಡಿ ಅಂಬೇಡ್ಕರ್ ಅವರ ತತ್ವ, ಸಿದ್ದಾಂತ, ಅವರ ಸಾಧನೆ, ಹೋರಾಟದ ಹಾದಿಗಳನ್ನು ತಂಡ ನಿರ್ಮಿಸಿ ಹಾಡು, ನಾಟಕಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಈ ತಂಡದಲ್ಲಿ ಚಾಮರಾಜನಗರ, ಹಾಸನ, ಮೈಸೂರಿನ ಕಲಾವಿದರಿದ್ದಾರೆ. ಮೈಸೂರಿನಿಂದ ಹೊರಟು ಚಾಮರಾಜನಗರ, ಬೆಂಗಳೂರು ಸೇರಲಿದೆ. ಬೆಂಗಳೂರಿನಲ್ಲಿ ಜು.20ರವರೆಗೆ ಹಲವೆಡೆ ನಾಟಕಗಳನ್ನು ಪ್ರಸ್ತುತಪಡಿಸಲಿದ್ದು, ಅಂತಾರಾಷ್ಟ್ರೀಯ ಸಮ್ಮೇಳನದ ಮಹತ್ವವನ್ನು ಸಾರಲಿದೆ. ಈಗಾಗಲೇ 2000 ಮಂದಿ ಹಗಲು ರಾತ್ರಿಯೆನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದೊಂದು ಚಳುವಳಿಯ ರೂಪದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಎಂದು ತಿಳಿಸಿದರು. ಈ ಸಂದರ್ಭ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಡಾ.ನರೇಂದ್ರಕುಮಾರ್, ಕನ್ನ ಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚೆನ್ನಪ್ಪ, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)