ಪ್ರಮುಖ ಸುದ್ದಿಮೈಸೂರು

ಚಿರತೆಯ ಮರಿಗಳು ಪತ್ತೆ

ನಂಜನಗೂಡು ತಾಲೂಕಿನ ಹಳ್ಳಿಕೆರೆ ಹುಂಡಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಚಿರತೆಯ ಮೂರು ಮರಿಗಳು ಪತ್ತೆಯಾಗಿವೆ.

ಚಿಕ್ಕಯ್ಯನ ಹೋಬಳಿ ಮರಳೂರು ಗ್ರಾಮಪಂಚಾಯತ್ ಗೆ ಸೇರುವ ಹಳ್ಳಿಕೆರೆಯಲ್ಲಿ ಪ್ರತ್ಯಕ್ಷವಾಗಿರುವ ಚಿರತೆಯು ಮರಿಗಳಿಗೆ ಜನ್ಮ ನೀಡಿ ಅಲ್ಲಿಂದ ತೆರಳಿದ್ದು ಈ ಮೂರು ಮರಿಗಳು ಕಳೆದ ಒಂದು ವಾರದ ಹಿಂದೆ ಜನಿಸಿದ್ದಾಗಿರಬಹುದೆಂದು ಶಂಕಿಸಲಾಗಿದೆ. ಶಿವಮ್ಮ ಮಹದೇವಪ್ಪ ಎಂಬವರ ಕಬ್ಬಿನಗದ್ದೆಯಲ್ಲಿ ಕಬ್ಬನ್ನು ಕಟಾವು ಮಾಡುತ್ತಿರುವ ವೇಳೆ ಚಿರತೆಯ ಮರಿಗಳು ಗೋಚರಿಸಿದ್ದು, ತಕ್ಷಣ ಗ್ರಾಮಪಂಚಾಯತ್ ಅಧ್ಯಕ್ಷರಿಗೆ ಸುದ್ದಿ ಮುಟ್ಟಿಸಿದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅವರು ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಚಿರತೆ ಮರಿಗಳನ್ನು ವೀಕ್ಷಿಸಿ ಇವುಗಳನ್ನು ಕೊಂಡೊಯ್ದರೆ ಬದುಕಿಸಲು ಕಷ್ಟ ಎಂದು ಅಲ್ಲಿಯೇ ಅವುಗಳನ್ನು ಬಿಟ್ಟು, ತಾಯಿ ಚಿರತೆ ಬರುವವರೆಗೂ ಇಲ್ಲೇ ಇರಲಿ ಎಂದಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: