ಮೈಸೂರು

ದಸರಾ ಕಾವಾ ಮೇಳದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚಾಮರಾಜೇಂದ್ರ ಸರಕಾರಿ ದೃಶ್ಯಕಲಾ ಕಾಲೇಜಿನಲ್ಲಿ ‘ದಸರಾ ಕಾವಾ ಮೇಳ’ ಕಲಾಕೃತಿಗಳ ಪ್ರದರ್ಶನ ಶನಿವಾರದಂದು ಆರಂಭವಾಯಿತು.

ಕಾಲೇಜಿನ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಹಸಿರು ದಸರಾ’ ಪರಿಕಲ್ಪನೆಯಲ್ಲಿ ರಚಿಸಿರುವ ಗ್ರೀಟಿಂಗ್ ಕಾರ್ಡ್, ಮಾಸ್ಕ್, ಪರಿಸರ ಮತ್ತು ಜಲ ಸಂರಕ್ಷಣೆ, ಆರೋಗ್ಯದ ಅರಿವು ಮೂಡಿಸುವ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಮೇಯರ್ ಬಿ.ಎಲ್. ಭೈರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ನೋಡಿ ಮೆಚ್ಚಿದರು.

ಅರಣ್ಯನಾಶ, ಕಾವೇರಿ ನದಿ ನೀರು ವಿವಾದ, ಧೂಮಪಾನ ಆರೋಗ್ಯಕ್ಕೆ ಹಾನಿಕರ ಮುಂತಾದ ಕಲಾಕೃತಿಗಳನ್ನು ನಿರ್ಮಿಸಿದ್ದರು. ಈ ಕಲಾಕೃತಿಗಳನ್ನು ನಿರ್ಮಿಸಲು ಯಂತ್ರಗಳನ್ನು ಕಾಲೇಜಿನಿಂದ ನೀಡಲಾಗಿದ್ದು, ಅದಕ್ಕೆ ಬೇಕಾದ ಇತರ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳೇ ಸ್ವಂತ ಹಣದಲ್ಲಿ ಖರೀದಿಸಿ ಕಲಾಕೃತಿ ಮಾಡಿದ್ದಾರೆ.

ವಿಜಯನಗರದ ನಿವಾಸಿಯಾಗಿರುವ ಸುಮಲತಾ ಅವರು ‘ಸಿಟಿ ಟುಡೇ’ಯೊಂದಿಗೆ ಮಾತನಾಡಿ, ವಿವಿಧ ಪ್ರಕಾರಗಳ ಕಲಾ ಮಾದರಿಯನ್ನು ಒಂದೆಡೆ ನೋಡುವುದು ಕಣ್ಣಿಗೆ ಒಂದು ಹಬ್ಬ. ನೀರು ಉಳಿಸಿ, ತಂಬಾಕು ನಿಷೇಧಿಸಿ, ಸಾಮಾಜಿಕ ಅರಿವು ಮೂಡಿಸುವ ಸಂದೇಶಗಳನ್ನು ಕಲೆಯ ಮೂಲಕ ತಿಳಿಸಿರುವುದು ಶ್ಲಾಘನೀಯ. ನಾನು ಹಲವು ವರ್ಷಗಳಿಂದ ಈ ರೀತಿಯ ಪ್ರದರ್ಶನಗಳಲ್ಲಿ ತಪ್ಪದೆ ಭಾಗಿಯಾಗುತ್ತೇನೆ ಎಂದರು.

cava

 

Leave a Reply

comments

Related Articles

error: