ಮೈಸೂರು

ಮೈಸೂರಿನಲ್ಲಿ ಐಐಸಿಎಸ್ ಟಿ ಅಕಾಡೆಮಿ ತರಬೇತಿ ಕೇಂದ್ರ ಆರಂಭ

ಮೈಸೂರು,ಜು.17 : ಸ್ಪರ್ಧಾತ್ಮಕ ಹಾಗೂ ಆಡಳಿತ ಸೇವೆಗಳ ಉತ್ಕೃಷ್ಟ ಗುಣಮಟ್ಟದ ಪರೀಕ್ಷಾ ತರಬೇತಿ ಕೇಂದ್ರ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಸಿವಿಲ್ ಸರ್ವೀಸ್ ಟ್ರೈನಿಂಗ್ ಅಕಾಡೆಮಿಯ ಪ್ರಾದೇಶಿಕ ಕಚೇರಿಯನ್ನು ನಗರದಲ್ಲಿ ಆರಂಭಿಸಲಾಗುತ್ತಿದೆ ಎಂದು ಧ್ರುವಕುಮಾರ್ ಎಸ್.ಹಿರೇಮಠ್ ತಿಳಿಸಿದರು.

ಅಕಾಡಮೆಯ ಪರವಾಗಿ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಆಡಳಿತ ಸೇವೆಗಳಾದ ಐಪಿಎಸ್, ಐಎಎಸ್, ಯುಪಿಎಸ್ಸಿ ಪರೀಕ್ಷೆಗಳ ತರಬೇತಿಯು ದಕ್ಷಿಣಭಾರತೀಯರಿಗೆ ಸಮರ್ಥವಾಗಿ ಲಭ್ಯವಾಗುತ್ತಿಲ್ಲ,  ಈ ನಿಟ್ಟಿನಲ್ಲಿ ನಮ್ಮ ತರಬೇತಿ ಕೇಂದ್ರವೂ ಉತ್ತಮ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಅನುಭವಿ ಹಾಗೂ ನುರಿತ ವಿಶ್ರಾಂತ ಐಎಎಸ್ ಅಧಿಕಾರಿಗಳಾದ ರಮೇಶ್ ಗೌಡ, ಡಾ.ಎ.ರವೀಂದ್ರ ಹಾಗೂ ಐಎಫ್ ಸಿಯ ಡಾ.ಪಾರ್ಥಸಾರಥಿಯು ನಮ್ಮ ಆಡಳಿತ ಮಂಡಳಿ ಸದಸ್ಯರಾಗಿದ್ದು. ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ, ಮಾರ್ಗದರ್ಶನ ಸೇರಿದಂತೆ .ಆಪ್ತ ಸಮಾಲೋಚನೆಯನ್ನು ನಡೆಸುವರು ಎಂದು ತಿಳಿಸಿದರು.

ಸಂದರ್ಶನ ಮುಖಾಂತರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು, ಆಸಕ್ತರು ಜು.30ರಂದು ನಡೆಯುವ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಅಕಾಡಮೆಯ ಶ್ರೀನಾಥ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.(ವರದಿ : ಕೆ.ಎಂ.ಆರ್)

Leave a Reply

comments

Related Articles

error: