ಮೈಸೂರು

ಒಂದು ಲಕ್ಷ ರೂ ಹಣ ಕಳುವು: ದೂರು ದಾಖಲು

ಮಂಡಿ ಮೊಹಲ್ಲಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರು ಬ್ಯಾಂಕ್ ನಿಂದ ಡ್ರಾ ಮಾಡಿಕೊಂಡು ಬಂದಿದ್ದ ಒಂದು ಲಕ್ಷ ರೂಪಾಯಿ ನಗದನ್ನು ಅಪಹರಿಸಿದ ಘಟನೆ ನಡೆದಿದೆ.

ಮಹದೇವ ಎಂಬವರೇ ಹಣ ಡ್ರಾ ಮಾಡಿಕೊಂಡು ಬಂದಿದ್ದ ವ್ಯಕ್ತಿಯಾಗಿದ್ದು, ಹಣವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಟಾಟಾ ಏಸ್ ವಾಹನದ ಸೀಟ್ ಹಿಂಭಾಗದಲ್ಲಿರಿಸಿದ್ದರು ಎನ್ನಲಾಗಿದೆ. ತನ್ನ ಸ್ನೇಹಿತ ಪ್ರದೀಪ್ ಹಾಗೂ ಮತ್ತಿಬ್ಬರ ಜೊತೆ ಸಯ್ಯಾಜಿರಾವ್ ಫಾಸ್ಟ್ ಫುಡ್ ಬಳಿ ವಾಹನ ನಿಲ್ಲಿಸಿ ಊಟಕ್ಕೆ ತೆರಳಿದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಊಟ ಮುಗಿಸಿ ವಾಪಸ್ ಆದಾಗ ಹಣವಿರಿಸಿದ ಜಾಗ ಖಾಲಿಯಾಗಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಅವರು ಮಂಡಿಮೊಹಲ್ಲಾ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

comments

Related Articles

error: