ಸುದ್ದಿ ಸಂಕ್ಷಿಪ್ತ
ಭಾರತದ ಕಣ್ಮಣಿಗಳು ಕೃತಿ ಲೋಕಾರ್ಪಣೆ
ಮೈಸೂರು,ಜು.17 : ಪ್ರಗತಿಪರ ಪ್ರಕಾಶನದ ಎ.ಪುಷ್ಪಾ ಅಯ್ಯಂಗಾರ್ ಅವರ ಭಾರತದ ಕಣ್ಮಣಿಗಳು ಕೃತಿಯ ಈಚೆಗೆ ಲೋಕಾರ್ಪಣೆಯಾಯಿತು.
ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಕೃತಿಯನ್ನು ಬಿಡುಗಡೆಗೊಳಿಸಿ ಸಮಾಜಕ್ಕೆ ಅಮೌಲ್ಯ ಸೇವೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಡಾ.ರಾಜಕುಮಾರ್, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಸೇರಿದಂತೆ 15 ಮಂದಿ ಸಾಧಕರ ಪರಿಚಯವು ಕೃತಿಯಲ್ಲಿ ಅಡಗಿದ್ದು ಮುಂದಿನ ಪೀಳಿಗೆಗೆ ಅತಿ ಉಪಯುಕ್ತ ಪುಸ್ತಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆ.ಎಸ್.ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ನಡೆದ ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ.ಲತಾ ರಾಜಶೇಖರ್, ಪ್ರಕಾಶಕ ಭೇರ್ಯ ರಾಮಕುಮಾರ್, ಜಯಪ್ಪ ಹೊನ್ನಾಳಿ, ಎ.ವೈದೇಹಿ ಇತರರು ಹಾಜರಿದ್ದರು. (ಕೆ.ಎಂ.ಆರ್)