ದೇಶ

ವಾರಣಾಸಿಯ ರಾಜಘಾಟ್‍ನಲ್ಲಿ ಕಾಲ್ತುಳಿತ: 24 ಮಂದಿ ಸಾವು

ಚಂದೌಲಿ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಾವಿರಾರು ಭಕ್ತರು ಚಂದೌಲಿ ಮತ್ತು ವಾರಣಾಸಿ ನಡುವಿನ ರಾಜಘಾಟ್ ಸೇತುವೆ ಮೇಲೆ ಸಾಗುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಸುಮಾರು 24 ಮಂದಿ ಸಾವನ್ನಪ್ಪಿದ್ದಾರೆ.

ಗಂಗಾ ನದಿ ತೀರದ ಡೋಮ್ರಿ ಗ್ರಾಮದಲ್ಲಿ ಧಾರ್ಮಿಕ ಗುರು ಜೈ ಗುರುದೇವ್ ಪಂಥ ಆಯೋಜಿಸಿದ್ದ ‘ಸಮಾಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ಕೇವಲ 3 ಸಾವಿರ ಮಂದಿಗೆ ಮಾತ್ರ ‘ಸಮಾಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದ್ದು, ಲಕ್ಷಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ವಿವಿಧೆಡೆಗಳಿಂದ ಆಗಮಿಸಿದ ಜನರು ಡೋಮ್ರಿ ಗ್ರಾಮಕ್ಕೆ ಮೆರವಣಿಗೆ ಮೂಲಕ ಹೊರಟಿದ್ದರು. ಸಾವಿರಾರು ಜನರು ರಸ್ತೆ ಮೂಲಕ ಹೋಗುತ್ತಿದ್ದಾಗ, ವಿಪರೀತ ಸಂಚಾರ ದಟ್ಟಣೆ ಕೂಡ ಉಂಟಾಗಿತ್ತು. ರಾಜಘಾಟ್ ಬಳಿ ಎಲ್ಲರೂ ವಿವಿಧೆಡೆಗಳಿಂದ ಬಂದವರೆಲ್ಲ ಒಟ್ಟಾಗಿ ಸೇರಿದಾಗ ಈ ಕಾಲ್ತುಳಿತ ನಡೆದಿದೆ. ವ್ಯಕ್ತಿಯೊಬ್ಬ ಜನರ ಗುಂಪಿನ ಮಧ್ಯೆ ಉಸಿರುಗಟ್ಟಿ ಮೃತಪಟ್ಟಿರುವುದು ಕೂಡ ವರದಿಯಾಗಿದೆ.

ವಾರಣಾಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ವಿವರಣೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ.

untitled-3

Leave a Reply

comments

Related Articles

error: