ಸುದ್ದಿ ಸಂಕ್ಷಿಪ್ತ

ಶ್ರೀ ಜಯಚಾಮರಾಜ ಒಡೆಯರ್ ಜನ್ಮದಿನೋತ್ಸವ : ಸಂಗೀತ ಮತ್ತು ಭರತನಾಟ್ಯ ರೂಪಕ

ಮೈಸೂರು,ಜು.17 : ಗೋಕುಲಂನ ಶ್ರೀಕೃಷ್ಣಗಾನಸಭಾ ಬ್ರಹ್ಮವಿದ್ಯಾ ಹಾಗೂ ಬೆಂಗಳೂರಿನ ಕಸಾಪ ಸಂಯುಕ್ತವಾಗಿ. ಜು.18ರ ಸಂಜೆ 6ಕ್ಕೆ, ಶ್ರೀಜಯಚಾಮರಾಜ ಒಡೆಯರ್ 98ನೇ ಜನ್ಮದಿನೋತ್ಸವದಂಗವಾಗಿ ಸಂಗೀತ ಮತ್ತು ಭರತನಾಟ್ಯ ರೂಪಕವನ್ನು ಹಮ್ಮಿಕೊಂಡಿದೆ.

ಶ್ರೀಕೃಷ್ಣ ದೇವಸ್ಥಾನದ ಪ್ರಾಂಗಣದ ಆಳ್ವಾರ್ ಕಲಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿ.ಎಸ್.ಶ್ರೀಧರ ರಾಜೇ ಅರಸ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಗೀತ ವಿದ್ವಾನ್ ಪ್ರೊ.ಎಚ್.ವಿ.ನಾಗರಾಜ ರಾವ್, ಮಳವಳ್ಳಿ ಮತ್ತು ಕಪ್ಪಡಿ ಮಠದ ಶ್ರೀ ವರ್ಚಸ್ವಿ ಸಿದ್ದಲಿಂಗರಾಜೇ ಅರಸು ಸಾನಿಧ್ಯ ವಹಿಸುವರು. (ಕೆ.ಎಂ.ಆರ್)

 

Leave a Reply

comments

Related Articles

error: