ಸುದ್ದಿ ಸಂಕ್ಷಿಪ್ತ
ಜು.18ಕ್ಕೆ ತಾಲ್ಲೂಕು ಯುವ ಸಮಾವೇಶ
ಮೈಸೂರು,ಜು.17 : ನೆರೆಹೊರೆ ಯುವಜನ ಸಂಸತ್ತು ಕಾರ್ಯಕ್ರಮದ ತಾಲ್ಲೂಕು ಯುವ ಸಮಾವೇಶವನ್ನು ನೆಹರು ಯುವ ಕೇಂದ್ರದಿಂದ ( ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ) ಜು.18ರ ಬೆಳಿಗ್ಗೆ 11ಕ್ಕೆ ನಂಜನಗೂಡಿನ ತಾ.ಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಾಸಕ ಕಳಲೆ ಕೇಶವಮೂರ್ತಿ ಉದ್ಘಾಟಿಸುವರು, ತಾ.ಪಂ.ಅಧ್ಯಕ್ಷ ಬಿ.ಎಸ್.ಮಹಾದೇವಪ್ಪ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ತಾ.ಪಂ.ಉಪಾಧ್ಯಕ್ಷ ಆರ್.ಗೋವಿಂದರಾಜನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಜಿ.ಪಂ.ಸದಸ್ಯ ಪುಷ್ಪಾ ನಾಗೇಶ್ ರಾಜ್, ಮಂಗಳ ಸೋಮಶೇಖರ್, ಮಧು ಕುಂಬ್ರಳ್ಳಿ ಸುಬ್ಬಣ್ಣ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)