ಮೈಸೂರು

ಅ.18ರಂದು ನಟ ಶಿವರಾಜ್‌ಕುಮಾರ್‍ಗೆ ‘ಕಾವೇರಿ ರತ್ನ’ ಪಶಸ್ತಿ ಪ್ರದಾನ

photo-002
ಕೊಡಗು ಹಾಗೂ ಮೈಸೂರು ಗಡಿ ಭಾಗದಲ್ಲಿರುವ ಕಾವೇರಿ ಪ್ರತಿಮೆ.

ಭಾರವಿ ಕನ್ನಡ ಸಂಘದ ವತಿಯಿಂದ ನೀಡುವ ‘ಕಾವೇರಿ ರತ್ನ’ ಪ್ರಶಸ್ತಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಈ ಕುರಿತು ಭಾರವಿ ಸಹೋದರರು ಮಾಹಿತಿ ನೀಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಅ.18 ರಂದು ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆಯೂ ನಡೆಯಲಿದ್ದು ಶಿವರಾಜ್ ಕುಮಾರ್ ಅವರು ಕೂಡ ಈ ಕೈಂಕರ್ಯದಲ್ಲಿ ಭಾಗಿಯಾಗುತ್ತಿದ್ದಾರೆ.

ಜೀವನದಿಗೆ ನಮನ: ಕನ್ನಡ ನಾಡಿನ ಜೀವನದಿ, ತಮಿಳುನಾಡಿನ ಆಸರೆಯಾದ ಕಾವೇರಿ ಎರಡೂ ರಾಜ್ಯಗಳಲ್ಲಿ ಭಾವನಾತ್ಮಕ ವಿಷಯವಾಗಿದೆ. ಬೆಂಗಳೂರಿಗರ ಬಾಯಾರಿಕೆ ತಣಿಸುವ ಕಾವೇರಿ, ಎರಡೂ ರಾಜ್ಯಗಳ ಅನ್ನದಾತೆ. ಮೈಸೂರು-ಕೊಡಗು ಗಡಿ ಭಾಗದಲ್ಲಿ ಬೈಲಕುಪ್ಪೆ ಸಮೀಪದ ಕೊಪ್ಪ ಗ್ರಾಮದ ಸಮೀಪ ನಿರ್ಮಿಸಿರುವ ಕಾವೇರಿ ಪ್ರತಿಮೆಯ ಬಳಿ ಅಖಿಲ ಕರ್ನಾಟಕ ರವಿಚಂದ್ರನ್ ಮತ್ತು ಭಾರವಿ ಕನ್ನಡ ಕಾವೇರಿ ಅಭಿಮಾನಿಗಳ ಸಂಘ ಪ್ರತಿ ವರ್ಷ ‘ಕಾವೇರಿ ರತ್ನ’ ಪ್ರಶಸ್ತಿಯನ್ನು ನಾಡಿನ ಗಣ್ಯರಿಗೆ ನೀಡುವುದರ ಜೊತೆಗೆ ಕಾವೇರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.

ಪ್ರತಿವರ್ಷ ತುಲಾ ಸಂಕ್ರಮಣದಂದು ಈ ಭಾಗದಲ್ಲಿ ಹಬ್ಬದ ವಾತವರಣವೇ ನಿರ್ಮಾಣವಾಗುತ್ತದೆ. ಏಕೆಂದರೆ, ‘ಕಾವೇರಿ ರತ್ನ’ ಪ್ರಶಸ್ತಿ ಪ್ರದಾನ ಜೊತೆಗೆ ಗಣ್ಯರು ಪಾಲ್ಗೊಳ್ಳುವುದು ಖಚಿತ. 2014 ರಲ್ಲಿ ಪ್ರಪ್ರಥಮ ಬಾರಿಗೆ ರವಿಚಂದ್ರನ್ ಆಗಮಿಸಿ ಕಾವೇರಿ ಪ್ರತಿಮೆಯನ್ನು ಉದ್ಘಾಟನೆ ಮಾಡಿದರು. ನಂತರ ಯೋಗಿಶ್ ಆಲಿಯಾಸ್ ಲೂಸ್‌ಮಾದ ಆಗಮಿಸಿದಾಗ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು. ನಂತರ 2015 ರಲ್ಲಿ ಆಗಮಿಸಿದ್ದ ನಟ ದೊಡ್ಡಣ್ಣ ಅವರಿಗೆ ‘ಕಾವೇರಿ ರತ್ನ’ ಪಶಸ್ತಿ ಜೊತೆಗೆ ಬೆಳ್ಳಿ ಕಿರೀಟ ನೀಡಿ ಗೌರವಿಸಲಾಗಿತ್ತು.

ಸಮಾಜಮುಖಿ ಸೇವೆಗೆ ಸದಾ ಬದ್ಧ ಭಾರವಿ ಬ್ರದರ್ಸ್: ಸಮಾಜ ಸೇವೆ ಜೊತೆಯಲ್ಲಿ ಕನ್ನಡದ ಕಾಳಜಿಯನ್ನು ಮೈದುಂಬಿಕೊಂಡು ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ರಚನೆಯಾದ ಭಾರವಿ ಕನ್ನಡ ಸಂಘವು 1993ರಿಂದ ನಗರದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಜನಮನದಲ್ಲಿ ನೆಲೆಯೂರಿತ್ತು. ಭಾರವಿ ಸಹೋದರರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಅವರುಗಳು, ನಂತರ ಕುಶಾಲನಗರಕ್ಕೆ ಕಾಲಿಟ್ಟ ಬಾರವಿ ಸಹೋದರರು ಹಂತ ಹಂತವಾಗಿ ಸ್ಥಳೀಯ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿ, ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಅದರ ಹಿನ್ನೆಲೆಯಲ್ಲಿ 2013ರಲ್ಲಿ ಕೊಡಗು ಹಾಗೂ ಮೈಸೂರು ಗಡಿ ಭಾಗದಲ್ಲಿ 11  ಅಡಿ ಎತ್ತರದ ಸುಂದರವಾದ ಬೃಹತ್ ಕಾವೇರಿ ಪ್ರತಿಮೆಯನ್ನು ನಿರ್ಮಿಸಿ, ಚಲನಚಿತ್ರ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಅಂದಿನ ಸಂಸದರಾದ ವಿಜಯ್‌ಶಂಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

10 ಸಾವಿರ ಬಾಟಲ್ ಕಾವೇರಿ ತೀರ್ಥ ವಿತರಣೆ: ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿ ತಿರ್ಥವನ್ನು ಕೊಡಗಿನ ತಲಾ ಕಾವೇರಿಯಿಂದ ತಂದು ಸಾರ್ವಜನಿಕರಿಗೆ ಇಲ್ಲಿ ನಿರ್ಮಿಸಿರುವ ಕಾವೇರಿ ಪ್ರತಿಮೆಯ ಬಳಿ ವಿತರಣೆ ಮಾಡುವುದರ ಜೊತೆಗೆ, ಅನ್ನಸಂತರ್ಪಣೆಯನ್ನೂ ನೆರವೇರಿಸುತ್ತಾರೆ. ಇದೇ ಅಕ್ಟೋಬರ್ 18 ರಂದು ನಡೆಯಲಿರುವ ಕಾವೇರಿ ತೀರ್ಥ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಒಂದು ವಾರದ ಮುಂಚೆಯೇ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಹಳೆಯ ಸೇತುವೆಯನ್ನು ಶೃಂಗಾರಗೊಳಿಸಿ, ಸುತ್ತಮುತ್ತ  ಕನ್ನಡ ಮಾತೆಯ ಧ್ವಜಗಳನ್ನು ರಾರಜಿಸುವಂತೆ ಮಾಡಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಜನತೆಯ ಪ್ರೀತಿಪಾತ್ರ ಕಾರಣ: ಇಂತಹ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ, ಮುಂದೆ ನಡೆಸಿಕೊಂಡು ಹೋಗಲು ನಮ್ಮ ಬೆನ್ನ ಹಿಂದೆ ನಿಂತು ಸ್ಫೂರ್ತಿ ತುಂಬುತ್ತಿರುವ ಕಾವೇರಮ್ಮನ ಕೃಪೆ , ನಟ ರವಿಚಂದ್ರನ್ ಮತ್ತು ಡಾ. ರಾಜ್‌ಕುಮಾರ್ ಕುಟುಂಬದ ಪ್ರೀತಿ, ನಾವು ಪ್ರೀತಿಸುವ ಜನರ ಪ್ರೀತಿ, ಬೆಂಬಲ ಕಾರಣ ಎನ್ನುತ್ತಾರೆ  ಭಾರವಿ ಬ್ರದರ್ಸ್.

(ಮೇಲಿನ ಫೋಟೊ: ಶಿವರಾಜ್ ಕುಮಾರ್ ರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬೆಂಗಳೂರಿಗೆ ತೆರಳಿದಾಗ ಅವರೊಂದಿಗೆ ಭಾರವಿ ಬ್ರದರ್ಸ್)

photo-003
ಕಾವೇರಿ ಪ್ರತಿಮೆಯ ಬಳಿ ಇರುವ ಪುರಾತನ ಸೇತುವೆಯನ್ನು ಶೃಂಗರಿಸಿರುವುದು.

 

Leave a Reply

comments

Related Articles

error: