ಸುದ್ದಿ ಸಂಕ್ಷಿಪ್ತ

ಬರಹಗಾರರಿಂದ ಅರ್ಜಿ ಆಹ್ವಾನ

ಮಡಿಕೇರಿ ಜು.17: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಸೃಜನಶೀಲ ಸಾಹಿತ್ಯ ಪ್ರಕಾರದಲ್ಲಿ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ನೆರವು ನೀಡುವ ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲು ಮತ್ತು ಸಮಸ್ಯೆಗಳ ಕುರಿತ ವಸ್ತು ವಿಷಯಗಳಿಗೆ ಸಂಬಂಧಪಟ್ಟಂತೆ ರಂಗ ನಾಟಕಗಳನ್ನು ರಚಿಸಲು ಆಸಕ್ತ ಮಕ್ಕಳು ಹಾಗೂ ಯುವ ಬರಹಗಾರರನ್ನು ನಾಟಕ ರಚನಾ ಕಮ್ಮಟಕ್ಕಾಗಿ ರಾಜ್ಯದ ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ, ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ, ಪ್ರತಿಯೊಂದು ಕಂದಾಯ ವಿಭಾಗದಿಂದ 30 ಮಕ್ಕಳನ್ನು ಹಾಗೂ 10 ಯುವ ಅರ್ಹ ಬರಹಗಾರರನ್ನು ಆಯ್ಕೆ ಮಾಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಮಕ್ಕಳು, ಯುವ ಮತ್ತು ಉದಯೋನ್ಮುಖ ಬರಹಗಾರರು ತಮ್ಮ ವಯಸ್ಸಿನ ದಾಖಲೆ, ಇತ್ತೀಚಿನ ಭಾವಚಿತ್ರ ಮತ್ತು ಸ್ವತಃ ಇತ್ತೀಚೆಗೆ ರಚಿಸಿರುವ ಸೃಜನಶೀಲ ಸಾಹಿತ್ಯ ಪ್ರಕಾರದ ಕನಿಷ್ಠ 10 ಪುಟಗಳಿರುವ ಬರಹವನ್ನು ಸ್ವ-ವಿವರವುಳ್ಳ ಅರ್ಜಿಯೊಂದಿಗೆ ಲಗತ್ತಿಸಿ ಆಯಾಯ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಬಹುದಾಗಿದೆ. ಮಕ್ಕಳ ವಯೋಮಿತಿ 16 ವಯಸ್ಸಿನ ಒಳಗಿರಬೇಕು. ಹಾಗೂ ಯುವ ಬರಹಗಾರರು 18 ವರ್ಷ ಮೇಲ್ಪಟ್ಟು 40 ವರ್ಷದೊಳಗಿನವರಾಗಿರಬೇಕು. ಅರ್ಜಿ ಸಲ್ಲಿಸಲು ಜುಲೈ, 22 ಕೊನೆಯ ದಿನವಾಗಿದೆ.

ಹೆಚ್ಚಿನ ವಿವರಗಲಿಗೆ ಬೆಂಗಳೂರು ವಲಯ ಸಂಚಾಲಕರಾದ ಸತೀಶ್ ಸಾಸ್ವೆಹಳ್ಳಿ ದೂ.ಸಂ:9844367071, ಮೈಸೂರು ವಲಯ ಸಂಚಾಲಕರಾದ ಜನಾರ್ಧನ್(ಜನ್ನಿ) ದೂ.ಸಂ:9945780989, ಬೆಳಗಾವಿ ವಲಯ ಸಂಚಾಲಕರಾದ ಶಂಕರಹಾಲಗ ದೂ.ಸಂ:7019792585 ಹಾಗೂ ಕಲಬುರಗಿ ವಲಯ ಸಂಚಾಲಕರಾದ ಪ್ರಭಾಕರ್ ಸಾತಖೇಡ್ ದೂ.ಸಂ: 9448814099/08472-228870 ಹಾಗೂ ಅಶೋಕ್ ಎನ್.ಚಲವಾದಿ, ಜಂಟಿ ನಿರ್ದೇಶಕರು(ಸಾ), ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ದೂ.ಸಂ: 080-22130912/22221241 ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: