ಸುದ್ದಿ ಸಂಕ್ಷಿಪ್ತ

ಕೂಡಿಗೆ ಕಾಲೇಜು ಉಪನ್ಯಾಸಕರಿಗೆ ಸನ್ಮಾನ

ಮಡಿಕೇರಿ ಜು.17 : 2016-17 ನೇ ಸಾಲಿನ ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಶೇ.100 ರಷ್ಟು ಫಲಿತಾಂಶ ಗಳಿಸಿದ್ದು, ಈ ಸಾಧನೆಗೆ ಕಾರಣಕರ್ತರಾದ ಕಾಲೇಜಿನ ಉಪನ್ಯಾಸಕರುಗಳನ್ನು ಜು.18 ರಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಗುವುದು ಎಂದು ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.

ಕಾಲೇಜಿನ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ಉದ್ಘಾಟಸಲಿದ್ದು, ಜಿಲ್ಲಾ ಆಸ್ಪತ್ರೆಯ ಮುಖ್ಯ ಉಪವೈದ್ಯಾಧಿಕಾರಿಗಳಾದ ಡಾ. ಎಸ್.ದೇವದಾಸ ಅಧ್ಯಕ್ಷತೆ ವಹಿಸಲಿದ್ದಾರೆ.

ಉಪನ್ಯಾಸಕರು ಹಾಗೂ ಸಮಾಜ ಸೇವಕರಾದ ಟಿ.ವಿ.ಕಿಶೋರ್ ಮುಖ್ಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ವೈದ್ಯಕೀಯ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಸತೀಶ್, ವ್ಯಾಂಡಮ್ ಎಂಟರ್ ಪ್ರೈಸಸ್‍ನ ಮಾಲೀಕರಾದ ದಾಮೋದರ್ ಉಪಸ್ಥಿತರಿರುವರು. ದಾನಿಗಳು ಹಾಗೂ ಸಮಾಜ ಸೇವಕರಾದ ಟಿ.ಆರ್.ವಾಸುದೇವ್, ಜಿ.ಪಂ. ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ವಿ.ಎಂ.ವಿಜಯ, ದಸಂಸ ವಿಭಾಗೀಯ ಸಂಚಾಲಕರಾದ ಎನ್.ವೀರಭದ್ರಯ್ಯ ಉಪನ್ಯಾಸಕರುಗಳನ್ನು ಸನ್ಮಾನಿಸಲಿದ್ದಾರೆ.

ಕುಶಾಲನಗರ ಹೋಬಳಿಯ ಸಂಚಾಲಕರು ಹಾಗೂ ಪಂಚಾಯತ್ ಸದಸ್ಯರಾದ ಹೆಚ್.ಡಿ.ಚಂದ್ರು, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಹೆಚ್.ಜೆ. ಈರಪ್ಪ, ಹೆಚ್.ಎ.ರವಿ, ತಾಲ್ಲೂಕು ಸಂಚಾಲಕರುಗಳಾದ ಹೆಚ್.ಎಲ್.ಕುಮಾರ್, ಹೆಚ್.ದಾಮೋದರ್, ತಾಲ್ಲೂಕು ಸಂಘಟನಾ ಸಂಚಾಲಕರಾದ ದೀಪಕ್, ಕೊಡ್ಲಿಪೇಟೆ ಹೋಬಳಿ ಸಂಚಾಲಕರಾದ ಡಿ.ಸಿ ಸೋಮಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: