ಕರ್ನಾಟಕ

108 ಸಿಬ್ಬಂದಿಯ ಧನದಾಹಕ್ಕೆ ಡೆಂಗ್ಯೂ ಪೀಡಿತ ಬಾಲಕ ಬಲಿ

ರಾಜ್ಯ(ತುಮಕೂರು)ಜು.18:-108 ಸಿಬ್ಬಂದಿಯ ಧನದಾಹಕ್ಕೆ ಡೆಂಗ್ಯೂ ಪೀಡಿತ ಬಾಲಕನೋರ್ವ  ಬಲಿಯಾದ ಘಟನೆ ಪಾವಗಡ ತಾಲೂಕಿನಲ್ಲಿ ನಡೆದಿದೆ.
ಮೃತನನ್ನು ಪಾವಗಡ ತಾಲೂಕಿನ ವೈ ಎನ್ ಹಳ್ಳಿಯ ನಿವಾಸಿ ವೆಂಕಟಸ್ವಾಮಿ -ಸುಗುಣಮ್ಮ ದಂಪತಿಯ ಪುತ್ರ  ಶ್ರೀ ನಿಧಿ (7) ಎಂದು ಗುರುತಿಸಲಾಗಿದೆ. ತೀವ್ರ ಅಸ್ವಸ್ಥ ಗೊಂಡ ಬಾಲಕನನ್ನು ತುಮಕೂರಿಗೆ ಕರೆದೊಯ್ಯಲು ಪಾವಗಡ ತಾಲೂಕಾಸ್ಪತ್ರೆಯ 108 ಸಿಬ್ಬಂದಿ ಲಂಚ ಕೇಳಿದ್ದಾರೆ. ಹಣ ನೀಡದಿರುವುದಕ್ಕೆ ಎರಡು ಗಂಟೆ ತಡಮಾಡಿ ಹೊರಟಿದ್ದು, ಜಿಲ್ಲಾ ಆಸ್ಪತ್ರೆಗೆ ಬರುವ ವೇಳೆ ಬಾಲಕನ ಇನ್ನಷ್ಟು ಗಂಭೀರಗೊಂಡಿದ್ದ. ಜಿಲ್ಲಾ ಆಸ್ಪತ್ರೆಯಿಂದ ಬೆಂಗಳೂರಿಗೆ ಸಾಗಿಸುವಾಗ ದಾರಿ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.
ಪೋಷಕರು 108 ಸಿಬ್ಬಂದಿ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: