ಮೈಸೂರು

ಕನ್ನಡಕ್ಕೆ ಆದ್ಯತೆ ನೀಡಲು ಒತ್ತಾಯ: ಪರಭಾಷೆಗಳ ಪ್ಲೆಕ್ಸ್ ತೆರವುಗೊಳಿಸಿದ ಕನ್ನಡ ಕ್ರಾಂತಿದಳ ಕಾರ್ಯಕರ್ತರು

ಮೈಸೂರು,ಜು.18:-ಪ್ರಧಾನಿ ಮೋದಿರವರು ಪ್ಲಾಸ್ಟಿಕ್ ಮುಕ್ತ ನಗರ ಮಾಡಬೇಕು ಎಂದು ಪಾಸ್ಟಿಕ್ ನ್ನು ಬ್ಯಾನ್ ಮಾಡಿದ್ದಾರೆ,ಆದರೇ ಮೈಸೂರಿನಲ್ಲಿ ರಾಜಸ್ಥಾನದಿಂದ ಬಂದು ಶಾಪಿಂಗ್ ಬಜಾರ್ ನಿರ್ಮಿಸಿದ್ದು, ಬಜಾರ್ ಮುಂಭಾದಲ್ಲಿ ಪ್ಲೇಕ್ಸ್  ಗಳನ್ನು ಹಾಕಲಾಗಿದ್ದು, ಮೊದಲು ಕನ್ನಡಕ್ಕೆ ಆದ್ಯತೆ ನೀಡದೇ ಪರಭಾಷೆಗಳ ಪ್ಲೆಕ್ಸ್  ಗಳನ್ನು ಹಾಕಿಕೊಂಡಿರುವುದನ್ನು ವಿರೋಧಿಸಿ ಕನ್ನಡ ಕ್ರಾಂತಿದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಕುವೆಂಪು ನಗರದ ಉದಯಗಿರಿ ರಸ್ತೆಯಲ್ಲಿರುವ ಜಯಗೋವಿಂದ್ ಕನ್ವೆನ್ಶನ್ ಹಾಲ್  ಮುಂಭಾಗ ಕಾರ್ಯಕರ್ತರು ಪರಭಾಷೆಯಲ್ಲಿ ರಾರಾಜಿಸುತ್ತಿದ್ದ ಪ್ಲೆಕ್ಸ್ ಗಳನ್ನು ತೆರವುಗೊಳಿಸಿದರು.  ಈ ಸಂದರ್ಭ ಕನ್ನಡ ಕ್ರಾಂತಿ ದಳದ ಯುವ ಘಟಕದ ಅಧ್ಯಕ್ಷ ತೇಜಸ್ ಶಿವಕುಮಾರ್  ಮಾತನಾಡಿ ನಮ್ಮ ದೇಶ ಜ್ಯಾತ್ಯಾತೀತ ರಾಷ್ಟ್ರವಾಗಿದ್ದು, ಯಾರು ಬೇಕಾದರೂ ಸಹ ಬಂದು ಇಲ್ಲಿ ಬೆಳೆಯಬಹುದು. ರಾಜಸ್ಥಾನದಿಂದ ಮೈಸೂರಿಗೆ ಬಂದು ರಾಜಸ್ಥಾನಿ ವಸ್ತುಗಳ ಬಜಾರ್ ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ ಅದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಪರಭಾಷೆಯ ಪ್ಲೆಕ್ಸ್  ಹಾಕಿರುವುದಕ್ಕೆ ನಮ್ಮ ವಿರೋಧವಿದೆ. ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದರು. ಪ್ರತಿಭಟನೆಯಲ್ಲಿ  ಮಂಜುನಾಥ್,  ಉಮೇಶ್, ಗುರುದತ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: