ಮೈಸೂರು

ರೈಲಿಗೆ ಸಿಲುಕಿ ಯುವಕ ಸಾವು

ನಾಗನಹಳ್ಳಿ ಬಳಿ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಚಾಮರಾಜನಗರ ಜಿಲ್ಲೆ ಜನ್ನೂರು ಹೊಸೂರು ಗ್ರಾಮದ ಕುಮಾರ್(24) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕ್ಯಾಟರಿಂಗ್‍ನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ದಸರಾ ಹಬ್ಬಕ್ಕಾಗಿ ಮನೆಗೆ ಬಂದು ವಾಪಸ್ ಹೋರಟ ಬಳಿಕ ಈ ದುರ್ಘಟನೆ ಸಂಭವಿಸಿದೆ.

ಆತನ ಮನೆಯವರು ಹೇಳುವ ಪ್ರಕಾರ, ಕುಮಾರ್ ಶುಕ್ರವಾರದಂದೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಆದರೆ, ಶವ ಮಾತ್ರ ಶನಿವಾರದಂದು ಸಿಕ್ಕಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: