ಮೈಸೂರು

ಪ್ರಜ್ಞಾವಂತರ ನಾಗರೀಕ ವೇದಿಕೆಯಿಂದ ಸ್ವಚ್ಛತಾ ಅಭಿಯಾನ

ಮೈಸೂರು,ಜು.18- ಮೈಸೂರು ಪ್ರಜ್ಞಾವಂತ ನಾಗರೀಕ ವೇದಿಕೆಯಿಂದ ನಗರದ ಬನ್ನಿಮಂಟಪದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಬಿಜೆಪಿ ಮುಖಂಡರಾದ ಎಚ್.ಜಿ.ಗಿರಿಧರ್ ಚಾಲನೆ ನೀಡಿದರು.

ಅಭಿಯಾನದ ಅಂಗವಾಗಿ ಬನ್ನಿಮಂಟಪದ ಎಲ್ಐಸಿ ವೃತ್ತದಲ್ಲಿ ಗೋಡೆ ಮೇಲೆ ಅಂಟಿಸಿದ್ದ ಭಿತ್ತಿ ಪತ್ರಗಳನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಜಿ.ಗಿರಿಧರ್, ಈ ರೀತಿ ಗೋಡೆಗಳ ಮೇಲೆ ಭಿತ್ತಿ ಪತ್ರಗಳನ್ನು ಅಂಟಿಸಿ ಮೈಸೂರಿನ ಸ್ವಚ್ಛತೆ ಹಾಳು ಮಾಡುತ್ತಿರುವವ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮೈಸೂರಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಘಟನೆಯು ವಾರದಲ್ಲಿ ಒಂದು ದಿನ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಉಪಮಹಾಪೌರರಾದ ರತ್ನ ಲಕ್ಷ್ಮಣ್, ಮಾಜಿ ಸಚಿವ ಸುರೇಶ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ರಘು ಕೌಟಿಲ್ಯ, ಆನಂದ್, ಅನಿಲ್ ಥಾಮಸ್, ನಾಗರಾಜು, ನಂದಕುಮಾರ್, ಮಣಿರತ್ನಂ ಇತರರು ಹಾಜರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: