ಮೈಸೂರು

ಪುಟ್ಟಗೌಡನಹುಂಡಿ ಸರ್ಕಾರಿ ಫ್ರೌಡಶಾಲೆಯಲ್ಲಿ ಸೈಕಲ್ ವಿತರಣೆ

ಮೈಸೂರು,ಜು.18:-  ವರಕೋಡು ತಾಲೂಕು ಪಂಚಾಯತ್  ವ್ಯಾಪ್ತಿಗೆ ಬರುವ ವರಕೋಡು ಹಾಗೂ ಪುಟ್ಟಗೌಡನಹುಂಡಿ ಸರ್ಕಾರಿ ಫ್ರೌಡಶಾಲೆಯಲ್ಲಿ 2017-2018 ನೇ ಸಾಲಿನ  8 ನೇ ತರಗತಿಯ ಮಕ್ಕಳಿಗೆ ಸೈಕಲ್ ಹಾಗು ಶೂ ವಿತರಣೆ ಮಾಡಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯ ಮುದ್ದರಾಮೇಗೌಡ ಮುಂದಿನ ಎಸ್ ಎಸ್ ಎಲ್ ಸಿ  ಪರೀಕ್ಷೆ ಯಲ್ಲಿ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 1,00000( ಒಂದು ಲಕ್ಷ) ವಿಶೇಷ  ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಿದರು.  ಸಮಾರಂಭದಲ್ಲಿ ಜಿಲ್ಲಾಪಂಚಾಯತ್  ಸದಸ್ಯೆ ಭಾಗ್ಯಮ್ಮ.  ತಾಲೂಕು ಪಂಚಾಯತ್ ಸದಸ್ಯ ಬರಿಗಾಲು ಮಾದಪ್ಪ, ಎಪಿಎಂಸಿ ಸದಸ್ಯ ಪಟೇಲ್ ಮಹದೇವಪ್ಪ, ಗ್ರಾಮಪಂಚಾಯತ್  ಅಧ್ಯಕ್ಷೆ ಭವಾನಿ ರವಿ, ಗ್ರಾಮಪಂಚಾಯತ್ ಸದಸ್ಯರಾದ ಬಸವರಾಜು,ಹುಚ್ಚಯ್ಯ, ಮಹೇಶ, ಮಂಜುಪ್ರಕಾಶ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: