ಮನರಂಜನೆ

ಮೈನೆ ಪ್ಯಾರ್ ಕಿಯಾ ನಟಿ ಭಾಗ್ಯಶ್ರೀ ತೆರೆಯಿಂದ ಮರೆಯಾಗಿದ್ದೇಕೆ..?

ದೇಶ(ಮುಂಬೈ)ಜು.18:- ಮೈನೆ ಪ್ಯಾರ್ ಕಿಯಾ ಸೂಪರ್ ಹಿಟ್ ಚಿತ್ರದಲ್ಲಿ ಕಾಣಿಸಿಕೊಂಡ ಭಾಗ್ಯಶ್ರೀ ಏನಾದಳು, ಯಾಕೆ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಅವರೇ  ತೆರೆ ಎಳೆದಿದ್ದಾರೆ.

ಭಾಗ್ಯಶ್ರೀ ಹಲವು ವರ್ಷಗಳ ನಂತರ ಮ್ಯಾಗ್ ಜಿನ್ ಒಂದಕ್ಕೆ ಸಂದರ್ಶನ ನೀಡಿದ್ದು, ತನ್ನ ಕಥೆಯನ್ನು ವಿವರಿಸಿದ್ದಾರೆ. ಭಾಗ್ಯಶ್ರೀ ಬಾಲ್ಯದ ಗೆಳೆಯ ಹಿಮಾಲಯ ದಾಸಾನಿಯನ್ನು ತುಂಬಾ ಪ್ರೀತಿಸುತ್ತಿದ್ದರಂತೆ. ಆದರೆ ಮನೆಯವರು ಅದಕ್ಕೆ ಬೆಂಬಲ ನೀಡಲಿಲ್ಲ. ಅಮೇರಿಕಾಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಬೇಕಾಗಿ ಬಂತು. ಹಿಮಾಲಯ ಮತ್ತು ನಾನು ಬೇರೆ, ಬೇರೆ ದೇಶದಲ್ಲಿ ವಾಸಿಸುತ್ತಿದ್ದೆವು. ಹಲವು ಸಮಯದ ಬಳಿಕ ಮತ್ತೆ ಮನೆಯಲ್ಲಿ ಒಪ್ಪಿಗೆ ಪಡೆಯಲು ಮುಂದಾದೆ ಆದರೆ ಮತ್ತೆ ನಿರಾಕರಣೆಯೇ ಕೇಳಿ ಬಂತು. ಇದರಿಂದ ಹಿಮಾಲಯಗೆ ಕರೆ ಮಾಡಿ ನಿಜವಾಗಿಯೂ ನೀನು ನನ್ನನ್ನು ಪ್ರೀತಿಸುತ್ತಿದ್ದಲ್ಲಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು  ಎಂದು ಹೇಳಿದೆ.  ಹಾಗೆ ಹೇಳಿ 15ನಿಮಿಷದೊಳಗೆ ಹಿಮಾಲಯ  ತಮ್ಮ ಮನೆಯ ಕೆಳಗೆ ನಿಂತಿದ್ದರು. ಅಲ್ಲಿಂದ ತೆರಳಿ ಒಂದು ದೇವಸ್ಥಾನದಲ್ಲಿ ಇಬ್ಬರೂ ಸತಿಪತಿಗಳಾದೆವು. ಬಹಳ ಬೇಗನೆ ಪುತ್ರ  ಅಭಿಮನ್ಯುವಿಗೆ ಜನ್ಮ ನೀಡಿದೆ. ಇದರಿಂದ ಚಿತ್ರರಂಗದಲ್ಲಿ ಮತ್ತೆ ಪ್ರವೇಶ ಸಾಧ್ಯವಾಗಿಲ್ಲ ಎಂದಿದ್ದಾರೆ. ನಾನು ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ಹಿಮಾಲಯ ಪೋಷಕರು ಒಪ್ಪಿಗೆ ನೀಡಿದ್ದರು ಇದರಿಂದ ಮೈನೇ ಪ್ಯಾರಕಿಯಾದಲ್ಲಿ ನಟನೆ ಸಾಧ್ಯವಾಯಿತು. ಬಳಿಕ ಬಹಳಷ್ಟು ಆಫರ್ ಬಂದಿತ್ತು. ಆದರೆ ನಾನೇ ನಿರಾಕರಿಸಿದೆ. ಅದರಿಂದ ನನಗೆ ಪಶ್ಚಾತ್ತಾಪ ಇಲ್ಲ ಎಂದಿದ್ದಾರೆ. ಭಾಗ್ಯಶ್ರೀ ತಮಿಳು, ತೆಲಗು,ಭೋಜಪುರಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. (ಎಸ್.ಎಚ್)

Leave a Reply

comments

Related Articles

error: