ದೇಶಪ್ರಮುಖ ಸುದ್ದಿ

ವೆಂಕಯ್ಯ ನಾಯ್ಡು ಖಾತೆಗಳು ಸ್ಮೃತಿ ಇರಾನಿ, ತೋಮರ್‍ಗೆ ಹಸ್ತಾಂತರ

ನವದೆಹಲಿ, ಜುಲೈ 18 : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿರುವ ವೆಂಕಯ್ಯ ನಾಯ್ಡು ಅವರು ನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರದ ಸಚಿವಾಲಯಗಳನ್ನು ಸ್ಮೃತಿ ಇರಾನಿ ಮತ್ತು ನರೇಂದ್ರ ಸಿಂಗ್ ತೋಮರ್ ಅವರಿಗೆ ವಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರದಲ್ಲಿ ವೆಂಕಯ್ಯ ನಾಯ್ಡು ಅವರು ನಿರ್ವಹಿಸುತ್ತಿದ್ದ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ಸ್ಮೃತಿ ಇರಾನಿಯವರಿಗೆ ಹಸ್ತಾಂತರಿಸಲಾಗಿದ್ದು, ನಗರಾಭಿವೃದ್ಧಿ ಇಲಾಖೆಯನ್ನು ತೋಮರ್ ಅವರಿಗೆ ವಹಿಸಲಾಗಿದೆ. ಸದ್ಯ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಇರಾನಿ ಹಾಗೂ ಗಣಿ ಇಲಾಖೆ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್ ಅವರಿಗೆ ಈ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಿದ್ದ ಹಿನ್ನೆಲೆಯಲ್ಲಿ, ವೆಂಕಯ್ಯ ನಾಯ್ಡು ಅವರು ಕೇಂದ್ರದಲ್ಲಿ ತಾವು ಹೊಂದಿದ್ದ ಸಚಿವ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಚುನಾವಣೆಯ ನಂತರ ಕೇಂದ್ರ ಮಂತ್ರಿಮಂಡಲದ ಪುನಾರಾಚನೆಯಾಗಲಿದೆ ಎನ್ನಲಾಗಿದ್ದು, ಖಾತೆಗಳನ್ನು ಮತ್ತೊಮ್ಮೆ ಬೇರೆ ಸಚಿವರಿಗೆ ವರ್ಗಾಯಿಸುವ ಸಾಧ್ಯತೆ ಇದೆ.

-ಎನ್.ಬಿ.

Leave a Reply

comments

Related Articles

error: