ಕರ್ನಾಟಕ

ಎತ್ತಿನಗಾಡಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ : ಎತ್ತು ಸಾವು

ರಾಜ್ಯ(ಮಂಡ್ಯ)ಜು.18:- ಎತ್ತಿನಗಾಡಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾದ  ಪರಿಣಾಮ ಒಂದು ಎತ್ತು ಸಾವನ್ನಪ್ಪಿದ ಘಟನೆ  ಪಾಂಡವಪುರದ ದೇವೇಗೌಡನಕೊಪ್ಪಲು ಬಳಿ ನಡೆದಿದೆ. ಮತ್ತೊಂದು ಎತ್ತು ಗಂಭೀರ ಗಾಯಗೊಂಡಿದೆ.ದೀಪಕ್ ಎಂಬ ರೈತರಿಗೆ ಸೇರಿದ ಎತ್ತುಗಳು ಅಪಘಾತದಲ್ಲಿ ಮಡಿದಿದೆ. ಮಂಡ್ಯದಿಂದ ಪಾಂಡವಪುರಕ್ಕೆ ಹೋಗುತ್ತಿದ್ದ ಬಸ್ ಎತ್ತಿನ ಗಾಡಿಗೆ ಡಿಕ್ಕಿಯಾಗಿದೆ. ಎತ್ತು ಕಳೆದುಕೊಂಡು ರೈತ ಆತಂಕದಲ್ಲಿದ್ದಾನೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: